ಲೈಂಗಿಕ ಜೀವನಕ್ಕೆ ಕೆಲವೊಂದು ಆಹಾರ ಉತ್ತಮ ಟಾನಿಕಂತೆ ಕೆಲಸ ಮಾಡುತ್ತದೆ. ಆದರೆ ಈ ಕೆಲವೊಂದನ್ನು ತಿಂದರೆ ಹಾಸಿಗೆ ಸುಖ ಕನ್ನಡಿಯ ಗಂಟು ಆಗುತ್ತೆ ಅಂತ ಸಂಶೋಧನೆಗಳು ತಿಳಿಸಿವೆ.
ಫ್ರೈಡ್ ಚಿಕನ್ ಇಷ್ಟಪಡುವವರಿಗೊಂದು ಬ್ಯಾಡ್ ನ್ಯೂಸ್. ಫ್ರೈಡ್ ಚಿಕನ್ ತಿನ್ನವರು ಲೈಂಗಿಕ ಸಂಬಂಧಿ ಸಮಸ್ಯೆಗೊಳಗಾಗುತ್ತಾರಂತೆ.
ತೈವಾನ್ ನ 17 ವರ್ಷದ ಹುಡುಗ ಜಾಕಿ ಎಂಬಾತನು ಫ್ರೈಡ್ ಚಿಕನ್ ತಿನ್ನುತ್ತಿದ್ದರಿಂದ ಆತನ ತೂಕ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಶುರುವಾಗಿದೆ. ಆದ್ರೆ ಇದನ್ನು ನಿರ್ಲಕ್ಷಿಸಿದ ಜಾಕ್, ಫ್ರೈಡ್ ಚಿಕನ್ ಸೇವನೆ ಮುಂದುವರೆಸಿದ್ದ.
ಈ ನಡುವೆ ಜಾಕ್ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಉತ್ತೇಜನದ ಕೊರತೆ ಎದುರಾಗ್ತಾ ಇತ್ತಂತೆ. ಈ ಕುರಿತು ವೈದ್ಯರನ್ನು ಭೇಟಿ ಮಾಡಿದಾಗ ಚಿಕಿತ್ಸೆ ನಡೆಸಿದ ವೈದ್ಯರು, ಕೊಲೆಸ್ಟ್ರಾಲ್ ಹೆಚ್ಚಾಗಿದ್ದು, ತೂಕ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಹಾಗೇ ಫ್ರೈಡ್ ಚಿಕನ್ ಸೇವಿಸಿದ್ದರಿಂದ ಅದು ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಫ್ರೈಡ್ ಚಿಕನ್ ಬಿಡುವಂತೆ ಸಲಹೆ ನೀಡಿದ್ದಾರಂತೆ.