ಹಸ್ತಮೈಥುನದಿಂದ ಪತ್ನಿಗೆ ಸಿಗುವ ಸುಖ ಎಂಥದ್ದು?
ಶನಿವಾರ, 18 ಜನವರಿ 2020 (14:27 IST)
ಸಮಸ್ಯೆ: ನಾನು 26 ವರ್ಷದ ಯುವಕ. ಮದುವೆಯಾಗಿ ಐದು ತಿಂಗಳಾಗಿದೆ. ನನಗೆ ಶೀಘ್ರ ಸ್ಖಲನದ ತೊಂದರೆ ಇದೆ. ಗುಪ್ತಾಂಗ ಬೇಗನೆ ಗಡುಸಾಗುತ್ತದೆ. ಆದರೆ ನನ್ನ ಪತ್ನಿಯ ಜೊತೆ ಸಂಭೋಗಕ್ಕೆ ಮುಂದಾಗುವಾಗ ಹಾಗೇ ವೀರ್ಯ ಚೆಲ್ಲಿಹೋಗುತ್ತದೆ. ಮದುವೆಯ ಮುಂಚೆ ಹಸ್ತಮೈಥುನ ಮಾಡುತ್ತಿದ್ದೆ. ಅದರಿಂದ ಏನಾದರೂ ತೊಂದರೆ ಇದೆಯಾ? ದಯವಿಟ್ಟು ಸೂಕ್ತ ಪರಿಹಾರ ನೀಡಿ, ದೀರ್ಘವಾಗಿ ಸಂಭೋಗ ಮಾಡುವ ಉಪಾಯ ಹೇಳಿಕೊಡಿ.
ಸಲಹೆ: ಮದುವೆಯಾಗಿ ಕೇವಲ ಐದು ತಿಂಗಳಾಗಿರುವುದರಿಂದ ಉದ್ವೇಗದಿಂದ ವೀರ್ಯ ಸ್ಖಲಿಸಿಬಿಡುತ್ತೀರಿ. ಆರಾಮವಾಗಿ, ಸಾವಕಾಶವಾಗಿ ಸರಸ ಮಾಡಿದರೆ ಆನಂದ ಇನ್ನಷ್ಟು ಹೆಚ್ಚು ಸಿಗುತ್ತದೆ. ವಿವಾಹಪೂರ್ವದಲ್ಲಿ ಹಸ್ತಮೈಥುನ ಮಾಡಿದ್ದರೆ ಏನೂ ತೊಂದರೆ ಇಲ್ಲ.
ಗುಪ್ತಾಂಗವನ್ನು ತುಂಬಾ ಹೊತ್ತು ನಿಮಿರುವಂತೆ ಮಾಡಲು ಅದರ ಮಣಿ ಮತ್ತು ಕಾಂಡವನ್ನು ಸೆರುವೆಡೆ ಹೆಬ್ಬೆರಳನ್ನು ಹಿಂಬದಿಯಲ್ಲೂ ಮತ್ತು ಮೂರನೆಯ ಬೆರಳುಗಳನ್ನು ಮುಂಬದಿಯಲ್ಲೂ ಹಿಡಿಯಬೇಕು. ಹಿಂದು ಮುಂದು ಅಲ್ಲಾಡಿಸಿ ಉದ್ರೇಕಿಸಿ ನಿಮಿರಿದ ಅಂಗವನ್ನು ಸಣ್ಣದು ಮಾಡುವುದೂ ಸುಲಭ.
ಪುನಃ ಹಿಂದು ಮುಂದು ಮಾಡುವುದರಿಂದ ಅದನ್ನು ಮತ್ತೆ ನಿಮಿರಿಸಬಹುದು. ಆದರೆ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ಒತ್ತು ಕೊಡಬಾರದು. ಇದನ್ನು ನೀವು ಮಾಡುವುದಕ್ಕಿಂತಲೂ ನಿಮ್ಮ ಪತ್ನಿಯ ಕೈಯಲ್ಲಿ ಮಾಡಿಸಿದರೆ ಹೆಚ್ಚು ಪರಿಣಾಮ ಉಂಟಾಗುತ್ತದೆ.