ಕಾಲೇಜ್ ಯುವತಿಗೆ ಹಸ್ತಮೈಥುನ ಚಟವಾಗೋದು ಏಕೆ?
ಭಾನುವಾರ, 5 ಏಪ್ರಿಲ್ 2020 (13:52 IST)
ಸಮಸ್ಯೆ : ನನಗೆ 19 ವರ್ಷಗಳು . ಕಾಲೇಜ್ ಗೆ ಹೋಗುತ್ತಾ ಇದ್ದೇನೆ . ದೇಹದ ತೂಕ ಹೆಚ್ಚಾಗಿದೆ . 70 ಕೆ . ಜಿ . ನನ್ನ ಸಮಸ್ಯೆ ಏನೆಂದರೆ ನನ್ನ ಸ್ತನಗಳ ಗಾತ್ರ ದೊಡ್ಡದಾಗಿದೆ . ಮೊದಲು 30 ಇಂಚಿನ ಬ್ರಾವನ್ನು ಧರಿಸುತ್ತಿದ್ದೆ ಆದರೆ 3 ವರ್ಷಗಳಿಂದ ಸ್ತನಗಳ ಗಾತ್ರ ದೊಡ್ಡದಾಗುತ್ತಲೇ ಇವೆ .
45 ಇಂಚಿನ ಬ್ರಾವನ್ನು ಹಾಕಿದರೂ ಕೂಡ ಸರಿಯಾಗಿ ಕೂರುತಿಲ್ಲ . ಇದರಿಂದ ಸಮಾರಂಭಗಳಿಗೆ ಹೋಗಲು ಆಗುತಿಲ್ಲ . ನನ್ನ ಸ್ನೇಹಿತರು ಹಾಗೂ ಸಂಬಂಧಿಕರು ಏಕೆ ಹೀಗಾಯಿತು ? ಎಂದು ಕೇಳುತ್ತಾರೆ . ನನಗೆ ಇದರಿಂದ ಮುಜುಗರ ಉಂಟಾಗಿದೆ . ಸ್ತನದ ಗಾತ್ರಗಳನ್ನು ಕಡಿಮೆ ಮಾಡಲು ಹಾಗೂ ಹಸ್ತಮೈಥುನ ಚಟವನ್ನು ನಿಲ್ಲಿಸಲು ಸೂಕ್ತ ಪರಿಹಾರ ಕೊಡಿ .
ಸಲಹೆ : ನೀವು ದಪ್ಪವಿರುವುದರಿಂದ ಇರುವುದರಿಂದ ನಿಮ್ಮ ಸ್ತನಗಳು ದಪ್ಪವಾಗಿವೆ . ಇದರಿಂದ ಯಾವುದೇ ತೊಂದರೆ ಇರುವುದಿಲ್ಲ . ರಾತ್ರಿ ಮಲಗುವ ಸಂದರ್ಭ ಬ್ರಾ ಹಾಕಬೇಡಿ . ಇದರಿಂದ ಸ್ತನಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ . ಪ್ರತಿ ದಿನ ವ್ಯಾಯಾಮ ಮಾಡಿ . ಊಟದ ಪಥ್ಯ ಮಾಡಿ , ದೇಹದ ತೂಕ ಕಡಿಮೆ ಮಾಡಿಕೊಂಡರೆ ಸ್ತನಗಳ ಗಾತ್ರವೂ ಕಡಿಮೆಯಾಗುತ್ತದೆ . ನಿಮ್ಮ ಸ್ತನಗಳನ್ನು ನೋಡಿ ಯಾರಾದರೂ ತಮಾಷೆ ಮಾಡಿಕೊಳ್ಳುತ್ತಾರೆಂಬ ಚಿಂತೆ ಬೇಡ .
ಹಸ್ತ ಮೈಥುನದ ವಿಚಾರದ ಬಗ್ಗೆ ನಾವು ಅನೇಕ ಬಾರಿ ಉತ್ತರಿಸಿದ್ದೇವೆ . ಪ್ರತೀ ಹರೆಯದ ಯುವಕರು ಹಾಗೂ ಯುವತಿಯರು ಹಸ್ತಮೈಥುನ ಮಾಡಿಕೊಂಡು ಖುಷಿಪಡುತ್ತಾರೆ . ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ . ಆದರೆ ಇದೇ ಚಟವಾಗಬಾರದು . ಯಾವುದಕ್ಕೂ ಒಂದು ಇತಿಮಿತಿ ಎಂದು ಇರುತ್ತದೆ . ಮಾನಸಿಕ ಒತ್ತಡದಿಂದ ಬಿಡುಗಡೆಗೊಳ್ಳಲು ಹಸ್ತಮೈಥುನವು ಸಹಕರಿಸುತ್ತದೆ .
ಆ್ಯಪ್ನಲ್ಲಿ ವೀಕ್ಷಿಸಿ x