ಕ್ರಿಯಾತ್ಮಕ ವ್ಯಕ್ತಿಗಳಿಗೆ ಸುಖ ನಿದ್ದೆಯ ಯೋಗವಿಲ್ಲ

ಮಂಗಳವಾರ, 31 ಜನವರಿ 2017 (09:21 IST)
ಬೆಂಗಳೂರು: ಸದಾ ಕ್ರಿಯಾಶೀಲವಾಗಿರುವವರು ಬಾಲ ಸುಟ್ಟ ಬೆಕ್ಕಿನಂತೆ ಓಡಾಡಿಕೊಂಡವರೆಲ್ಲಾ ಈ ಒಂದು ಸಮಸ್ಯೆ ಎದುರಿಸುತ್ತಾರಂತೆ. ಅದುವೇ ಸುಖ ನಿದ್ದೆಯ ಸಮಸ್ಯೆ.  ಹಾಗಂತ ಒಂದು ಸಂಶೋಧನೆ ಬಹಿರಂಗಪಡಿಸಿದೆ.

 
ಕ್ರಿಯಾಶೀಲರಾಗಿರುವವರೆಲ್ಲಾ ಯಾವತ್ತೂ ಏನೋ ಹೊಸದೊಂದು ಮಾಡುವ ಯೋಚನೆಯಲ್ಲೇ ಇರುತ್ತಾರೆ. ಅವರಿಗೆ ರಾತ್ರಿ ಸರಿಯಾಗಿ ನಿದ್ರೆಯೂ ಬರೋದಿಲ್ಲ ಎಂದು ಇಸ್ರೇಲ್ ನ ವಿವಿಯೊಂದು ಅಧ್ಯಯನ ನಡೆಸಿ ಕಂಡುಕೊಂಡಿದೆ.

ದಾರ್ಶನಿಕವಾಗಿ ಕ್ರಿಯಾತ್ಮಕವಾಗಿರುವ ವ್ಯಕ್ತಿಗಳಿಗೆ ನಿದ್ರೆ ಜಾಸ್ತಿ ಬರೋದಿಲ್ಲ. ಆದರೆ ಮಾತಿನ ಮಲ್ಲರಿಗೆ ನಿದ್ರೆ ಹೆಚ್ಚು ಎಂದು ವಿವಿ ಕಂಡುಕೊಂಡಿದೆ. ನಿದ್ರೆ ಜಾಸ್ತಿ ಆಗದೆ ಅಂತಹ ಕ್ರಿಯಾತ್ಮಕ ಮನಸ್ಸುಳ್ಳ ವ್ಯಕ್ತಿಗಳು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ ಎಂಬುದು ಅಧ್ಯಯನಕಾರರ ಅಭಿಪ್ರಾಯ.

ಯುವ ವಿದ್ಯಾರ್ಥಿಗಳ ಮೇಲೆ ಈ ಸಂಶೋಧನೆ ನಡೆಸಲಾಗಿತ್ತು.ಇವರಲ್ಲಿ ಹೆಚ್ಚು ಕ್ರಿಯಾತ್ಮಕವಾಗಿರುವ ವಿದ್ಯಾರ್ಥಿಗಳು ಹೆಚ್ಚು ನಿದ್ರೆ ಮಾಡೋಲ್ಲ ಎನ್ನುವುದು ಪತ್ತೆಯಾಗಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ