ಗಾಯವಾಗಿದೆಯೇ? ಬಾಯಿಗೆ ಸಕ್ರೆ ಹಾಕಿ ಮತ್ತೆ..!

ಶುಕ್ರವಾರ, 3 ಫೆಬ್ರವರಿ 2017 (09:49 IST)
ಬೆಂಗಳೂರು: ಚಿಕ್ಕ ಮಕ್ಕಳು, ಆಗ ತಾನೇ ನಿಲ್ಲಲು ಕಲಿಯುತ್ತಿರುವ ಮಕ್ಕಳು ಆಗಾಗ ಬೀಳುವುದು, ಹಲ್ಲು ಕಚ್ಚಿ ರಕ್ತ ಸೋರುವುದು ಸಾಮಾನ್ಯ. ಬಾಯಿಯೊಳಗೆ ಗಾಯವಾಗಿ ರಕ್ತ ಸೋರುತ್ತಿದ್ದರೆ ಮಕ್ಕಳಿಗೆ ತಕ್ಷಣ ಮಾಡಬಹುದಾದ ಮನೆ ಮದ್ದು ಏನು ಗೊತ್ತಾ?

 
ತಕ್ಷಣ ಮಾಡಬಹುದಾದ ಮನೆ ಮದ್ದೆಂದರೆ ಬಾಯಿಗೆ ಸಕ್ಕರೆ ಹಾಕಿ. ಆಗ ರಕ್ತ ಹೆಪ್ಪುಗಟ್ಟುವುದು, ಸಕ್ಕರೆಯ ಸಿಹಿಗೆ ಮಗುವಿನ ಅಳುವೂ ನಿಲ್ಲುತ್ತದೆ. ಯಾಕೆಂದರೆ ಸಕ್ಕರೆಯಲ್ಲಿ ರಕ್ತ ಹೆಪ್ಪುಗಟ್ಟಿಸುವ ಗುಣವಿದೆ.

ಸಕ್ಕರೆಯಲ್ಲಿ ಆಂಟಿ ಸೆಫ್ಟಿಕ್ ಗುಣವಿದ್ದು, ಇದು ಗಾಯ ಶುಚಿಗೊಳಿಸಲು ಮತ್ತು ಬೇಗನೇ ರಕ್ತ ಹೆಪ್ಪುಗಟ್ಟಿಸಲು ನೆರವಾಗುತ್ತದೆ. ಇದರಿಂದ ಗಾಯ ಬೇಗನೇ ಗುಣಮುಖವಾಗುವುದಲ್ಲದೆ, ನೋವೂ ಇರುವುದಿಲ್ಲ. ಬಾಯಿಯೊಳಗೆ ಮುಲಾಮು ಹಚ್ಚಲು ಸಾಧ್ಯವಾಗದೇ ಇರುವುದಕ್ಕೆ ಇದು ಮನೆಯಲ್ಲೇ ಸುಲಭವಾಗಿ ಮಾಡಬಲ್ಲ ಮದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ