ಬೆಂಗಳೂರು : ರೇಷ್ಮೆ ಬಟ್ಟೆಗಳನ್ನು ತುಂಬಾ ಕಾಳಜಿ ವಹಿಸಿ ನೋಡಿಕೊಳ್ಳಬೇಕು. ಇಲ್ಲವಾದರೆ ಅದು ಬಹಳ ಬೇಗನೆ ಹಾಳಾಗುತ್ತದೆ. ಹಾಗಾಗಿ ರೇಷ್ಮೆ ಬಟ್ಟೆಗಳ ಹೊಳಪನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ.
ರೇಷ್ಮೆ ಬಟ್ಟೆಗಳನ್ನು ಹೆಚ್ಚು ವಾಶ್ ಮಾಡಬಾರದು. ಒಂದು ವೇಳೆ ಕಲೆಯಾದರೆ ಡಿಟರ್ ಜೆಂಟ್ ಮಿಶ್ರಿತ ನೀರಿನಲ್ಲಿ ನೆನೆಸಿಟ್ಟು ಕಲೆಗಳನ್ನು ಸ್ವಚ್ಛಗೊಳಿಸಿ.
ಹಾಗೇ ರೇಷ್ಮೆ ಬಟ್ಟೆಗಳ ಬಣ‍್ಣ ಮರಳಿ ಪಡೆಯಲು ಬೆಚ್ಚಗಿನ ನೀರಿಗೆ ವಿನೆಗರ್ ಮಿಕ್ಸ್ ಮಾಡಿ ಅದರಲ್ಲಿ ನೆನೆಸಿಡಿ. 10 ನಿಮಿಷದೊಳಗೆ ಅದನ್ನು ತೆಗೆದು ಸಾಮಾನ್ಯ ನೀರಿನಲ್ಲಿ ವಾಶ್ ಮಾಡಿ ಗಾಳಿಯಲ್ಲಿ ಒಣಗಿಸಿ.