ಬೆಂಗಳೂರು : ನಾವು ತಿಂಡಿ, ಸಾಂಬಾರು, ಪಲ್ಯಗಳನ್ನು ಮಾಡಲು ತೆಂಗಿನ ಕಾಯಿಯನ್ನು ಬಳಸುತ್ತೇವೆ. ಇದನ್ನು ಬಳಸಿದ ನಂತರ ಉಳಿದ ತೆಂಗಿನ ಕಾಯಿ ಹಾಳಾಗಬಾರದೆಂದು ಫ್ರಿಜ್ ನಲ್ಲಿ ಇಡುತ್ತಾರೆ. ಆದರೆ ಫ್ರಿಜ್ ಇಲ್ಲದವರು ತೆಂಗಿನಕಾಯಿಯನ್ನು 4-5 ದಿನ ಹೊರಗಡೆ ಹಾಳಾಗದಂತೆ ಇಡಲು ಈ ಟ್ರಿಕ್ಸ್ ಫಾಲೋ ಮಾಡಿ.
ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದರಲ್ಲಿ ತೆಂಗಿನಕಾಯಿಯ ಭಾಗವನ್ನು ಮುಳುಗಿಸಿಡಿ. ಈ ನೀರನ್ನು ಪ್ರತಿದಿನ ಬದಲಾಯಿಸಿ. ಹೀಗೆ ಮಾಡಿದರೆ ತೆಂಗಿನಕಾಯಿ 4-5 ದಿನವಾದರೂ ಹಾಳಾಗದೆ ಹಾಗೇ ಇರುತ್ತದೆ.