ಬೆಂಗಳೂರು : ಕೆಲವರಿಗೆ ಲೊ-ಬ್ಯಾಕ್ ಬ್ಲೌಸ್ ಅಥವಾ ಬ್ಯಾಕ್ಲೆಸ್ ಡ್ರೆಸ್ ಅಥವಾ ಚೋಲಿ ಧರಿಸಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಬೆನ್ನನ್ನು ಮೃದುವಾಗಿ ಕಾಣಿಸುವಂತೆ ಮಾಡಲು ಬಾಡಿ ಸ್ಕ್ರಬ್ ಮಾಡಬೇಕಾಗುತ್ತದೆ. ಇದರಿಂದ ಬೆನ್ನು ತುಂಬಾ ಸುಂದರವಾಗಿ ಕಾಣುತ್ತದೆ. ಆದರೆ ಬಾಡಿ ಸ್ಕ್ರಬ್ ಮಾಡುವಷ್ಟು ಸಮಯ ಸಿಗದಿದ್ದಾಗ ಈ ವಿಧಾನದಿಂದ ಬೆನ್ನನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.
ಒಂದು ಟೀ ಲೋಟದಷ್ಟು ಕಲ್ಲು ಉಪ್ಪು ತೆಗೆದುಕೊಂಡು ಅದನ್ನು ಒಂದು ಲೋಟ ಆಲಿವ್ ಆಯಿಲ್ ಒಳಗೆ ಹಾಕಿ. ಇದಕ್ಕೆ 5 ಹನಿಗಳಷ್ಟು ಗಂಧದ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಅದನ್ನು ಒಂದು ಜಾರ್ ಅಲ್ಲಿ ಶೇಖರಿಸಿ ಇಡಿ. ನೀವು ನಿಮ್ಮ ದೇಹದ ಯಾವೆಲ್ಲಾ ಭಾಗಗಳನ್ನ ತೋರಿಸಬೇಕು ಎಂದಿದ್ದೀರಿ ಅವುಗಳ ಮೇಲೆಲ್ಲಾ ಈ ಮಿಶ್ರಣವನ್ನು ಚೆನ್ನಾಗಿ ತಿಕ್ಕಿ. ನಂತರ ಒಣಗಿದ ಟವೆಲ್ ಇಂದ ಆ ಭಾಗಗಳನ್ನ ಒರೆಸಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.