ಬೆಂಗಳೂರು : ಸಾಮಾನ್ಯವಾಗಿ ನಾವು ಎಲ್ಲಾ ಅಡುಗೆಗೆ ಉಪ್ಪನ್ನು ಬಳಸುತ್ತೇವೆ. ಉಪ್ಪು ಆರೋಗ್ಯಕ್ಕೆ ಎಷ್ಟು ಉತ್ತಮವೋ? ಹೆಚ್ಚಾಗಿ ಸೇವಿಸಿದರೆ ಅದರಿಂದ ಹಾನಿ ಕೂಡ ಸಂಭವಿಸುತ್ತದೆ.
ಉಪ್ಪಿನಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳೆಯುವುದಿಲ್ಲ. ಇದು ನರಗಳ ಪ್ರಚೋದನೆಗೆ , ಸ್ನಾಯುಗಳ ಸಂಕೋಚನೆಗೆ , ನೀರು ಮತ್ತು ಖನಿಜ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಹೃದ್ರೋಗ, ಅಧಿಕ ಬಿಪಿ, ಪಾರ್ಶ್ವವಾಯು, ಮೂತ್ರಪಿಂಡಗಳ ಕಾಯಿಲೆಯನ್ನು ಹೆಚ್ಚಿಸುತ್ತದೆ. ಆದಕಾರಣ ದಿನಕ್ಕೆ 5ಗ್ರಾಂ ಉಪ್ಪನ್ನು ಸೇವಿಸುವುದು ಉತ್ತಮ ಎನ್ನಲಾಗಿದೆ.