ವಯಸ್ಸಿಗೆ ತಕ್ಕಂತೆ ಎಷ್ಟು ಸಮಯ ನಿದ್ದೆ ಮಾಡಬೇಕು ಗೊತ್ತಾ...?

ಮಂಗಳವಾರ, 16 ಜನವರಿ 2018 (07:42 IST)
ಬೆಂಗಳೂರು : ಪ್ರತಿಯೊಬ್ಬ ಮನುಷ್ಯನಿಗೂ ಗಾಳಿ, ನೀರು, ಆಹಾರದ ಜೊತೆಗೆ ನಿದ್ದೆ ಕೂಡ ಅತ್ಯವಶ್ಯಕ. ಕೆಲಸ ಕಾರ್ಯಗಳನ್ನು ಸರಿಯಾಗಿ ನಡೆಸಿಕೊಂಡು ಹೋಗಲು ನಿದ್ದೆ, ವಿಶ್ರಾಂತಿ ತುಂಬಾ ಸಹಾಯಕವಾಗಿದೆ. ನಿದ್ದೆಯಲ್ಲಿ ಹೆಚ್ಚು ಕಡಿಮೆಯಾದರೆ ಮನುಷ್ಯನಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತದೆ. ಅವರವರ  ವಯಸ್ಸಿಗೆ ತಕ್ಕಂತೆ ಎಷ್ಟು ಕಾಲ ನಿದ್ದೆ ಮಾಡಬೇಕು ಎಂಬುದರ ಬಗ್ಗೆ ಎಲ್ಲರೂ ತಿಳಿಯಬೇಕು.


ತಜ್ಞರ ಪ್ರಕಾರ ನವಜಾತ ಶಿಶು ಮೂರು ತಿಂಗಳವರೆಗೆ ದಿನಕ್ಕೆ 14 ರಿಂದ  17 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಆಮೇಲೆ 4 ರಿಂದ 11 ತಿಂಗಳ ಕಾಲ ಮಕ್ಕಳು 12 ರಿಂದ 15 ಗಂಟೆಗಳ ಕಾಲ ನಿದ್ದೆ ಮಾಡುವಂತೆ ನೋಡಿಕೊಳ್ಳಬೇಕು. ಹಾಗೆ 1 ರಿಂದ 2 ವರ್ಷದ ಒಳಗಿನ ಮಕ್ಕಳು 11ರಿಂದ 14 ಗಂಟೆಗಳ ಕಾಲ ನಿದ್ದೆ ಮಾಡಬೇಕು. 3 ರಿಂದ 5 ವರ್ಷದೊಳಗಿನ ಮಕ್ಕಳು 10 ರಿಂದ 13 ಗಂಟೆಗಳ ಕಾಲ ನಿದ್ದೆ ಮಾಡಿದರೆ ಉತ್ತಮ. 6 ರಿಂದ 13 ವರ್ಷದ ಮಕ್ಕಳು 9 ರಿಂದ 11 ಗಂಟೆಗಳ ಕಾಲ ನಿದ್ದೆ ಮಾಡಬೇಕು. 14 ರಿಂದ 17 ವರ್ಷ ವಯಸ್ಸಿನವರು ದಿನಕ್ಕೆ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ನಿದ್ದೆ  ಮಾಡಬೇಕು. 18 ರಿಂದ 64 ವರ್ಷ ವಯಸ್ಸಿನವರು 7 ರಿಂದ 9 ಗಂಟೆಗಳ ಕಾಲ ನಿದ್ರಿಸಬೇಕು.ಹಾಗೆ 65 ವರ್ಷ ಮೇಲ್ಪಟ್ಟವರು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಉತ್ತಮವೆಂದು ವೈದ್ಯರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ