ಮಣ್ಣಿನ ಮಡಕೆಯಲ್ಲಿದೆ ಆರೋಗ್ಯದ ಗುಟ್ಟು

ಗುರುವಾರ, 26 ಜನವರಿ 2017 (08:48 IST)
ಬೆಂಗಳೂರು: ಹಿಂದಿನ ಕಾಲದಲ್ಲಿ ಸ್ಟೀಲ್ ಪಾತ್ರಗಳ ಬಳಕೆ ಅಷ್ಟಾಗಿ ಇದ್ದಿಲ್ಲ. ಅಡುಗೆ ಮಾಡುವುದರಿಂದ ಹಿಡಿದು ತಿನ್ನುವವರೆಗೂ ಮಣ್ಣಿನ ಪಾತ್ರೆಗಳ ಬಳಕೆ ಹೆಚ್ಚಾಗಿತ್ತು. ಈ ಮಣ್ಣಿನ ಮಡಕೆಯಲ್ಲಿ ನೀರು ತುಂಬಿಡುವ ಪರಿಪಾಠ ಕೆಲವು ಮನೆಗಳಲ್ಲಿ ಇಂದಿಗೂ ಇದೆ. ಇದರ ಆರೋಗ್ಯಕರ ಲಾಭಗಳು ಏನೇನು ಎಂದು ನೋಡೋಣ.
 

ಕೆಲವರಿಗೆ ಫ್ರಿಜ್ ನಲ್ಲಿಟ್ಟ ತಂಪು ನೀರು ಕುಡಿದರೆ ಶೀತ ಗ್ಯಾರಂಟಿ. ಬೇಸಿಗೆಯಲ್ಲಿ ಬಾಯಾರಿಕೆಯಾಗುವಾಗ ತಂಪು ನೀರು ಕುಡಿಯಬೇಕೆಂದಾದರೆ ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಇಟ್ಟು ಬೇಕಾದಾಗ ಕುಡಿಯಬಹುದು. ಇದು ತಂಪಾಗಿರುತ್ತದೆ.

ಇನ್ನೊಂದು ಬಹು ಮುಖ್ಯ ಲಾಭವೆಂದರೆ  ಮಣ್ಣಿನ ಮಡಕೆಯಲ್ಲಿ ತುಂಬಿದ ನೀರನ್ನು ಕುಡಿದರೆ ಅಸಿಡಿಟಿ, ಗ್ಯಾಸ್ ಸಂಬಂಧಿತ ಖಾಯಿಲೆ ಇರುವವರಿಗೆ ಉತ್ತಮ. ಮಣ್ಣಿನ ಮಡಕೆಯಲ್ಲಿ ಪ್ರಾಕೃತಿಕವಾಗಿ ದೊರಕುವ ಪೋಷಕಾಂಶಗಳು ಇರುವ ಕಾರಣಕ್ಕೆ ಈ ಪಾತ್ರೆಯನ್ನು ನಮ್ಮ ಪೂರ್ವಜರು ಬಳಸುತ್ತಿದ್ದರು.

ಇಂದು ಫ್ರಿಜ್ ಬಂದ ಮೇಲೆ ಮಣ್ಣಿನ ಪಾತ್ರೆ ಬೆಲೆ ಕಳೆದುಕೊಂಡಿರಬಹುದು. ಆದರೆ ಫ್ರಿಜ್ ಆಹಾರಾದಂತೆ ಇದರಲ್ಲಿ ತುಂಬಿಟ್ಟ ಆಹಾರ ಬಳಸುವುದರಿಂದ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದು.

ನೈಸರ್ಗಿಕವಾಗಿ ಆಗುವ ತಂಪು ನೀರು ಕುಡಿದರೆ ಆರೋಗ್ಯ ಹದಗೆಡದು ಎಂಬುದು ಮಾತ್ರವಲ್ಲ, ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀರು ತುಂಬಿಡುವುದರಿಂದ ರಾಸಾಯನಿಕಗಳು ಬಿಡುಗಡೆಯಾಗಿ ಅನಾರೋಗ್ಯಕ್ಕೆ ಕಾರಣವಾಗುವಂತೆ ಮಣ್ಣಿನಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಯಾವುದೇ ಅಂಶಗಳು ಇರುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ