ಆಯಸ್ಸು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ!

ಗುರುವಾರ, 22 ಫೆಬ್ರವರಿ 2018 (09:56 IST)
ಬೆಂಗಳೂರು: ದೀರ್ಘಾಯುಷ್ಯವಿರಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ದೀರ್ಘಾಯುಷಿಗಳಾಗಿ ಬದುಕಬೇಕಾದರೆ ಕೆಲವು ಆಹಾರ ವಸ್ತುಗಳಿಂದ ಸಾಧ್ಯ ಎನ್ನುತ್ತದೆ ಆಯುರ್ವೇದ. ಆ ಆಹಾರ ವಸ್ತಗಳು ಯಾವುವು ನೋಡೋಣ.
 

ನೆಲ್ಲಿ ಕಾಯಿ
ವಿಟಮಿನ್ ಸಿ, ಕಬ್ಬಿಣದಂಶ ಹೇರಳವಾಗಿರುವ ನೆಲ್ಲಿಕಾಯಿ ಸೇವನೆ ಆರೋಗ್ಯ, ಆಯುಷ್ಯ ವೃದ್ಧಿಸುತ್ತದೆ ಎಂದು ಹಲವು ಬಾರಿ ನಾವು ಓದಿ ತಿಳಿದುಕೊಂಡಿರುತ್ತೇವೆ.

ಶುಂಠಿ
ಶುಂಠಿಯಲ್ಲಿ ಅಧಿಕ ಆಂಟಿ ಆಕ್ಸಿಡೆಂಟ್ ಅಂಶವಿದೆ. ಇದರಲ್ಲಿ ಸುಮಾರು 25 ಬಗೆಯ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು, ಇದು ನಮ್ಮ ದೇಹವನ್ನು ಹಲವು ರೋಗಗಳು ಬಾರದಂತೆ ತಡೆಯುತ್ತದೆ.

ಏಲಕ್ಕಿ
ಏಲಕ್ಕಿ ದೇಹದಲ್ಲಿರುವ ವಿಶಾಂಷ ಹೊರ ಹಾಕುತ್ತದೆ ಎನ್ನಲಾಗುತ್ತದೆ. ಇದರಿಂದ ನಮ್ಮ ಆಂತರಿಕ ದೇಹ ಭಾಗಗಳು ವಿಷಮುಕ್ತವಾಗುತ್ತದೆ. ಆರೋಗ್ಯವಾಗಿರುತ್ತೇವೆ ಎನ್ನಲಾಗಿದೆ.

ಜೀರಿಗೆ
ಜೀರಿಗೆ ದೇಹದಲ್ಲಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ದೇಹದಲ್ಲಿರುವ ಅಸಿಡಿಕ್ ಅಂಶವನ್ನು ಹೊರ ಹಾಕಿ ನರ ವ್ಯೂಹ ಚುರುಕುಗೊಳಿಸುತ್ತದೆ.

ಚಕ್ಕೆ
ಚಕ್ಕೆ ರೋಗ ನಿರೋಧಕ, ಅಲರ್ಜಿ ನಿವಾರಕ ಮತ್ತು ವೈರಾಣುಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಹೀಗಾಗಿ ಹೆಚ್ಚಿನ ರೋಗ ಬಾರದಂತೆ ತಡೆಯುತ್ತದೆ. ರೋಗ ಮುಕ್ತ ಜೀವನ, ದೀರ್ಘಾಯುಷ್ಯದ ದಾರಿಯಲ್ಲವೇ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ