ರಾತ್ರಿ ಮೂರು ಬಾರಿ ಸೇರುತ್ತೇವೆ, ಗರ್ಭನಿರೋಧಕ ಗುಳಿಗೆ ಕೆಲಸ ಮಾಡದಿದ್ದರೆ ಎಂಬ ಭಯ!
ಗುರುವಾರ, 3 ಅಕ್ಟೋಬರ್ 2019 (08:53 IST)
ಬೆಂಗಳೂರು: ಸಾಮಾನ್ಯವಾಗಿ ಒಂದು ಬಾರಿ ರತಿಕ್ರೀಡೆಯಾಡುವುದರಲ್ಲೇ ದಂಪತಿ ಸುಸ್ತಾಗಿಹೋಗುತ್ತಾರೆ. ಹಾಗಿದ್ದರೂ ಒಂದೇ ಸಲ ಎರಡು, ಮೂರು ಬಾರಿ ಸಂಭೋಗಿಸಿದರೆ ಗರ್ಭನಿರೋಧಕವೂ ವಿಫಲವಾಗುವ ಸಾಧ್ಯತೆಯಿದೆಯಾ?
ಗಂಡ-ಹೆಂಡತಿ ಇಬ್ಬರಿಗೂ ಸಹಮತವಿರುವಾಗ ಏನೂ ತೊಂದರೆಯಿಲ್ಲದೇ ಇದ್ದಾಗ ಒಂದೇ ರಾತ್ರಿ ಮೂರು ಬಾರಿ ಸಂಭೋಗಿಸಿದರೆ ತಪ್ಪೇನಿಲ್ಲ. ಆದರೆ ಗರ್ಭನಿರೋಧಕ ಗುಳಿಗೆ ಬಳಸುತ್ತಿರುವಾಗ ಈ ರೀತಿ ಮಾಡಿದರೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವ ಸಾಧ‍್ಯತೆಯಿದೆಯೇ ಎಂಬ ಆತಂಕ ಕಾಡಬಹುದು. ಗರ್ಭನಿರೋಧಕ ಗುಳಿಗೆ ಸೇವಿಸುವುದರಿಂದ ಈ ರೀತಿ ಮಾಡಿದರೆ ಗರ್ಭಧಾರಣೆಯಾಗುವ ಸಾಧ‍್ಯತೆಯಿಲ್ಲ. ಆದರೆ ದೈಹಿಕವಾಗಿ ಸುಸ್ತು ಅಥವಾ ಗುಪ್ತಾಂಗದಲ್ಲಿ ನೋವು ಇತ್ಯಾದಿ ಸಮಸ್ಯೆಯಿದ್ದರೆ ಇದನ್ನು ಅವಾಯ್ಡ್ ಮಾಡುವುದೇ ಒಳ್ಳೆಯದು.