ಕಿಡ್ನಿ ಕಲ್ಲು ಸಮಸ್ಯೆ ತಪ್ಪಿಸಲು ಯಾವ ಆಹಾರ ಸೇವಿಸಬಾರದು?

ಭಾನುವಾರ, 22 ಅಕ್ಟೋಬರ್ 2017 (07:09 IST)
ಬೆಂಗಳೂರು: ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿಮೂತ್ರ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಪಾರಾಗಲು ನಾವು ಯಾವ ಆಹಾರ ಸೇವಿಸಬಾರದು ನೋಡೋಣ.

 
ಉಪ್ಪು
ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ಉಪ್ಪು ಹೆಚ್ಚು ಸೇವಿಸಿದರೆ ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಉತ್ಪತ್ತಿಯಾಗುತ್ತದೆ. ಇದು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.

ಕ್ಯಾಲ್ಶಿಯಂ
ಕಿಡ್ನಿ ಕಲ್ಲು ಎನ್ನುವುದು ಕ್ಯಾಲ್ಶಿಯಂ ಪ್ರಮಾಣ ಹೆಚ್ಚುವುದರಿಂದಲೂ ಬರಬಹುದು. ಅಧಿಕ ಪ್ರಮಾಣದ ಕ್ಯಾಲ್ಶಿಯಂ ಕಿಡ್ನಿ ಕಲ್ಲಾಗಿ ಪರಿವರ್ತನೆಯಾಗಬಹುದು.

ಹುಳಿ
ಅಧಿಕ ಆಮ್ಲೀಯ ಪದಾರ್ಥದ ಸೇವನೆಯೂ ಒಳ್ಳೆಯದಲ್ಲ. ಸ್ಟ್ರಾಬೆರಿ, ಚಹಾ, ಒಣಹಣ್ಣುಗಳು, ಪಾಲಕ್ ಸೊಪ್ಪು ಹೆಚ್ಚು ಸೇವಿಸದಿರಿ.

ಸಕ್ಕರೆ
ಸಕ್ಕರೆ ತಿಂದರೆ ಮಧುಮೇಹ ಖಾಯಿಲೆ ಮಾತ್ರ ಬರುವುದು ಅಂದುಕೊಳ್ಳಬೇಡಿ. ಸಕ್ಕರೆಯಲ್ಲಿರುವ ಕ್ಯಾಲ್ಶಿಯಂ ಅಂಶ ಕೂಡಾ ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ