ಶುಂಠಿ ಚಹಾ ಸೇವಿಸಿ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಾಣಿ!

ಬುಧವಾರ, 5 ಏಪ್ರಿಲ್ 2017 (08:47 IST)
ಬೆಂಗಳೂರು: ಪ್ರತಿದಿನ ಚಹಾ ಕುಡಿಯುವ ಅಭ್ಯಾಸವಿದೆಯಲ್ಲಾ? ಚಹಾ ಮಾಡುವಾಗ ಒಂದು ಚೂರು ಶುಂಠಿ ಸೇರಿಸಿ ಕುಡಿಯಿರಿ! ಆರೋಗ್ಯದಲ್ಲಿ ಅದೆಂತಹಾ ಬದಲಾವಣೆ ಕಾಣಬಹುದು ಗೊತ್ತಾ?!

 

ಬಹಿರ್ದೆಸೆ ಸುಗಮವಾಗಲು

ಪ್ರತಿದಿನ ಶುಂಠಿ ಚಹಾ ಸೇವಿಸುವುದರಿಂದ ಬಹಿರ್ದೆಸೆ ಸುಗಮವಾಗುವುದಷ್ಟೇ ಅಲ್ಲ, ಬೆಳಗಿನ ಹೊತ್ತಿಗೆ ವಾಕರಿಕೆ, ಹೊಟ್ಟೆ ಸಂಕಟ ಆಗುತ್ತಿದ್ದರೆ ಉತ್ತಮ ಮನೆ ಮದ್ದು.

 
ಜೀರ್ಣಕ್ರಿಯೆ

ಉದರ ಸಂಬಂಧಿ ಸಮಸ್ಯೆಗಳಿಗೆ ಶುಂಠಿ ಚಹಾ ಸಹಕಾರಿ. ಜೀರ್ಣಕ್ರಿಯೆಗೆ ಸಹಕರಿಸುವುದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ.

ಒತ್ತಡ

ಶುಂಠಿ ಚಹಾ ಒತ್ತಡ ನಿವಾರಿಸಿ, ಮೂಡ್ ಚೆನ್ನಾಗಿರಿಸುತ್ತದಲ್ಲದೆ, ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.

 
ಅಸ್ತಮಾ

 
ಅಸ್ತಮಾ ರೋಗಿಗಳಿಗೂ ಇದು ಉತ್ತಮ. ಶ್ವಾಸಕೋಶ ಸಡಿಲಗೊಳಿಸಿ, ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ