ಆರೋಗ್ಯಕರ ಹಲಸಿನ ಉಪಯೋಗಗಳು

ಮಂಗಳವಾರ, 19 ಜೂನ್ 2018 (15:48 IST)
ಹಣ್ಣುಗಳ ರಾಜ ಮಾವು ಎಂಬುದು ಸಾರ್ವತ್ರಿಕ. ಆದರೆ ನಿಜವಾಗಿ ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ ಹೀಗೆ ಒಂದಲ್ಲ ಒಂದು ಬಳಕೆಗೆ ಸಿಗುವ ಹಲಸು ನಿಜವಾದ ಮಹಾರಾಜ. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆಯೋ ಹಾಗೆಯೇ ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರವಾದ ಪ್ರಯೋಜನಗಳನ್ನು ಒಳಗೊಂಡಿದೆ.

ನಮ್ಮ ಆರೋಗ್ಯಕ್ಕೆ ಲಾಭದಾಯಕವಾದ ಹಲವಾರು ಪೋಷಕವಸ್ತುಗಳನ್ನು ಹಲಸು ಹೊಂದಿದೆ. ಇದರಲ್ಲಿ ವಿಟಮಿನ್ ಎ. ವಿಟಮಿನ್ ಸಿ. ಪೊಟೊಷಿಯಂ ಕ್ಯಾಲ್ಸಿಯಂ, ಐರ್‍ನ ಅಂಶಗಳಿವೆ. ಅಲ್ಲದೆ, ಇದರಲ್ಲಿ ಪೈಬರ್ ಅಂಶ ಇದೆ. 
 
* ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ.
 
* ಹಲಸಿನ ಹಣ್ಣಿನ ಬೀಜಗಳನ್ನು ಹುರಿದು ಸೇವಿಸಿದರೆ ವೀರ್ಯವೃದ್ದಿಯಾಗುತ್ತದೆ.
 
* ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ.
 
* ನೂರು ಗ್ರಾಂ ಹಲಸಿನ ಹಣ್ಣಿನಲ್ಲಿ 303 ಮಿ. ಗ್ರಾಂ ಪೊಟ್ಯಾಷಿಯಂ ಇರುತ್ತದೆ. ಪೊಟ್ಯಾಷಿಯಂ ಸೇವಿಸಿದರೆ ಅದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
 
* ಹಲಸಿನಲ್ಲಿ ಸ್ಯಾಪೋನಿನ್ಸ್, ಲಿಗ್ನಾನ್ಸ್ ಮತ್ತು ಐಸೋಫ್ಲೇವೋನ್ಸ್ ಎಂಬ ಪೋಷಕಾಂಶಗಳಿವೆ. ಇವು ದೇಹಕ್ಕೆ ಆಗಮಿಸಬಹುದಾದ ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಆವರಿಸದಂತೆ ತಡೆಯುತ್ತದೆ.
 
* ಹಲಸಿನ ಹಣ್ಣಿನ ತೊಳೆಗಳನ್ನು ಅರೆದು ಹಾಲು ಸಕ್ಕರೆ ಬೆರಸಿ ಕುದಿಸಿ ಸೇವಿಸಿದರೆ ದೇಹಕ್ಕೆ ಪುಷ್ಟಿಕರವಾಗಿರುತ್ತದೆ.
 
* ಹೆಚ್ಚು ದಾಹವಾಗುವ ಸಮಸ್ಯೆ ಇದ್ದರೆ ಹಲಸಿನ ಹಣ್ಣನ್ನು ಸಕ್ಕರೆ ಜೊತೆ ಸೇವಿಸಿದರೆ ದಾಹ ನಿವಾರಣೆಯಾಗುತ್ತದೆ.
 
* ಹಲಸಿನ ಮರದ ಚಕ್ಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ಬಾಯಲ್ಲಿ ಹುಳವಾಗಿದ್ದರೆ ಹುಳಗಳು ಶಮನವಾಗುತ್ತವೆ.
 
* ಹಲಸಿನ ಹಣ್ಣು ವಿಟಮಿನ್ ಎ ಯಿಂದ ಸಮೃದ್ಧವಾಗಿದ್ದು, ಆರೋಗ್ಯಕರ ಕಣ್ಣು ಮತ್ತು ತ್ವಚೆಗಾಗಿ ಒಂದು ಶಕ್ತಿಯುತ ನ್ಯೂಟ್ರಿಯೆಂಟ್ ಆಗಿದೆ. 
 
* ಹಲಸಿನ ಹಣ್ಣು ಇರುಳುಗುರುಡುತನ ಮತ್ತು ಅಕ್ಷಿಪಟಲದ ಅವನತಿ ಸಮಸ್ಯೆಯನ್ನು ದೂರಮಾಡುತ್ತದೆ.
 
* ಹಲಸಿನ ತೊಳೆಗಳಿಗೆ ಬಾಳೆಹಣ್ಣಿನ ತಿರುಳು, ಹಸಿ ಕೊಬ್ಬರಿ ತುರಿ, ಜೇನು ತುಪ್ಪ, ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ ಸೇವಿಸುವುದರಿಂದ ದುರ್ಬಲ ನರಗಳಿಗೆ ಬಲ ಬರುತ್ತದೆ.
 
* ಹಲಸಿನ ಬೇರನ್ನು ಕುದಿಸಿ ಆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.
 
* ಹಲಸಿನ ಹಣ್ಣಿನ ಪೋಷಕಾಂಶಗಳು ಹೆರಿಗೆಯ ಬಳಿಕ ಮಗುವಿಗೆ ಅಗತ್ಯವಿರುವ ತಾಯಿಹಾಲನ್ನು ಉತ್ಪಾದಿಸಲೂ ನೆರವಾಗುತ್ತವೆ.
 
* ಹಲಸಿನ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್ ಮತ್ತು ಫ್ರುಕ್ಟೋಸ್ ನಿಮ್ಮ ಶಕ್ರಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.
 
* ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ.
 
* ಮುಖಕ್ಕೆ ಲಕ್ವ ಹೊಡೆದು ನೋವಿದ್ದರೆ ಹಲಸಿನ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಮುಖದ ಮೇಲೆ ಇಟ್ಟು ಕಟ್ಟಿದರೆ ನೋವು ಕಡಿಮೆಯಾಗುತ್ತದೆ.
 
* ಹಲಸಿನ ಹಣ್ಣು ಮತ್ತು ಬೆಲ್ಲವನ್ನು ಜೊತೆಯಲ್ಲಿ ಸೇವಿಸಿದರೆ ಪಿತ್ತಶಮನವಾಗುತ್ತದೆ.
 
* ಕಣ್ಣಿನ ಸುತ್ತ ನೆರಿಗೆಗಳ ನಿವಾರಣೆಗೆ. ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ. ಮೊಡವೆಗಳ ನಿವಾರಣೆಗು ಸಹ ಹಲಸು ಅತ್ಯುತ್ತಮ ಔಷಧವಾಗಿದೆ.
 
* ಹಲಸಿನ ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಅನೀಮಿಯಾವನ್ನು ದೂರ ಮಾಡಿ ದೇಹದ ಸೂಕ್ತ ರಕ್ತ ಸಂಚಲನೆಗೆ ಫಲಪ್ರದವಾಗಿದೆ.
 
* ಹಥದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಕಾಯಿಲೆಯನ್ನು ಹಲಸಿನ ಹಣ್ಣು ಪರಿಹರಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ