ಬೆಂಗಳೂರು : ಮೊಳೆತ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮೊಳಕೆ ಬರಿಸಿದ ಹುರುಳಿಕಾಳಿನಿಂದ ತೊಕ್ಕು ಮಾಡಿ ತಯಾರಿಸಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು : ½ ಕಪ್ ಮೊಳಕೆ ಬರಿಸಿದ ಹುರುಳಿಕಾಳು, 3 ಈರುಳ್ಳಿ, 1 ಟೊಮೆಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ¼ ಕಪ್ ತೆಂಗಿನ ತುರಿ, 1 ಚಮಚ ಜೀರಿಗೆ, ½ ಚಮಚ ಕಾಳು ಮೆಣಸು, ಒಣಮೆಣಸಿನಕಾಯಿ 6, ಬೆಳ್ಳುಳ್ಳಿ-3 ಎಸಳು, 1 ಚಮಚ ಕೊತ್ತಂಬರಿ, ಚಿಕ್ಕ ತುಂಡು ಚಕ್ಕೆ.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಚಕ್ಕೆ, ಜೀರಿಗೆ, ಕೊತ್ತಂಬರಿ, ಬೆಳ್ಳುಳ್ಳಿ, ತೆಂಗಿನತುರಿ, ಕಾಳು ಮೆಣಸು ಎಲ್ಲವನ್ನೂ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಮಿಕ್ಸಿಯಲ್ಲಿ ರುಬ್ಬಿ ಮಸಾಲೆ ರೆಡಿ ಮಾಡಿಟ್ಟುಕೊಳ್ಳಿ. ಬಳಿಕ ಕುಕ್ಕರ್ ಗೆ ಮೊಳಕೆ ಬರಿಸಿದ ಹುರುಳಿ ಕಾಳನ್ನು ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಕರಿಬೇವು, ಈರುಳ್ಳಿ, ಟೊಮೆಟೊ, ಉಪ್ಪು ಹಾಕಿ ಬೇಯಿಸಿ. ಅದಕ್ಕೆ ರುಬ್ಬಿಟ್ಟ ಮಸಾಲೆ ಹಾಕಿ ಚೆನ್ನಾಗಿ ಕುದಿಸಿ. ಕಾಳು ಸೇರಿಸಿ ಮತ್ತೊಮ್ಮೆ ಕುದಿಸಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಬಿಸಿ ಅನ್ನದ ಜತೆ, ಚಪಾತಿ ಜತೆ ಇದು ಚೆನ್ನಾಗಿರುತ್ತದೆ.