ಬೇಯಿಸದೇ ಸೇವಿಸುವ ಉಪ್ಪು ಎಷ್ಟು ಅಪಾಯಕಾರಿ ಗೊತ್ತಾ?

ಬುಧವಾರ, 3 ಅಕ್ಟೋಬರ್ 2018 (08:54 IST)
ಬೆಂಗಳೂರು: ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ನಮಗೆ ಗೊತ್ತು. ಉಪ್ಪಿಲ್ಲದ ಊಟ ಖಂಡಿತಾ ರುಚಿಯಾಗಲ್ಲ. ಆದರೆ ಬಾಯಿಗೆ ರುಚಿಕೊಡುವ ಉಪ್ಪು, ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ.

ಎಷ್ಟು ಪ್ರಮಾಣ ಸೇವಿಸಬೇಕೋ ಅಷ್ಟೇ ಬಳಸಿದರೆ ತೊಂದರೆಯಿಲ್ಲ. ಆದರೆ ಮಿತಿ ಮೀರಿ ಉಪ್ಪು ಸೇವನೆ, ಕಿಡ್ನಿ, ಹೃದಯ, ರಕ್ತದೊತ್ತ, ಹೊಟ್ಟೆ ಹುಣ್ಣು ಇತ್ಯಾದಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಾವು ತಿಳಿದಿದ್ದೇವೆ.

ಅದರಲ್ಲೂ ಬೇಯಿಸದೇ ಸೇವಿಸುವ ಉಪ್ಪು ಹಲವು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತೆ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯ. ಬೇಯಿಸಿ ಉಪ್ಪು ಸೇವಿಸುವುದರಿಂದ ಅದರಲ್ಲಿರುವ ಐರನ್ ಸ್ಟ್ರಕ್ಚರ್ ಸರಳೀಕೃತಗೊಳ್ಳುತ್ತದೆ ಮತ್ತು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಬೇಯಿಸದ ಉಪ್ಪಿನಲ್ಲಿ ಐರನ್ ಸ್ಟ್ರಕ್ಚರ್ ಹಾಗೇ ಉಳಿದುಕೊಂಡು ಹೃದಯ ಮತ್ತು ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ