ನಿದ್ದೆ ಮಾಡಲೂ ಸಮಯವಿಲ್ಲವೇ? ರೋಗ ನಿರೋಧಕ ಶಕ್ತಿ ಕುಂಠಿತವಾಗಬಹುದು ಜೋಕೆ!

ಮಂಗಳವಾರ, 31 ಜನವರಿ 2017 (09:31 IST)
ಬೆಂಗಳೂರು: ಕೆಲಸ, ಟೆನ್ ಷನ್ ಇನ್ನೇನೋ ಕಾರಣ.. ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲವೇ? ಹಾಗಿದ್ದರೆ ಹುಷಾರಾಗಿರಿ. ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ.

 
ನಿದ್ರೆ ಸರಿಯಾಗಿ ಮಾಡದೇ ಇದ್ದರೆ ನಿಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದೇನೋ ನಿಜ. ಹಾಗಂತ ನಿದ್ರೆ ಮಾಡದೆ, ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.

ನಮ್ಮ ದೇಹಕ್ಕೆ ದಿನದಲ್ಲಿ ಏಳರಿಂದ ಎಂಟು ಗಂಟೆ ನಿದ್ರೆ ಅಗತ್ಯ. ನಿದ್ರೆ ಮಾಡುವ ಸಮಯದಲ್ಲಿ ನಮ್ಮ ದೇಹದ ಅಂಗಾಂಗಳೂ ರಿಫ್ರೆಷ್ ಆಗಿ ಮರುದಿನ ಹೊಸದಾಗಿ ಚಟುವಟಿಕೆಗಳಿಗೆ ತಯಾರಾಗಲು ಉತ್ಸಾಹದಿಂದ ಸಿದ್ಧವಾಗುತ್ತದೆ.

ವಾಷಿಂಗ್ಟನ್ ವಿವಿಯ ಅಧ್ಯಯನಕಾರರ ಪ್ರಕಾರ ಕಡಿಮೆ ನಿದ್ರೆ ಮಾಡುವುದೆಂದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ನಾವೇ ಕಳೆದುಕೊಂಡಂತೆ. ಹಾಗಾಗಿ ಯಾರೋ ಅಪಹಾಸ್ಯ ಮಾಡುತ್ತಾರೆಂದು ಕಣ್ತುಂಬಾ ನಿದ್ರೆ ಮಾಡುವ ಅಭ್ಯಾಸವನ್ನು ತಪ್ಪಿಸಿಕೊಳ್ಳಬೇಡಿ. ನೆನಪಿಡಿ. ನಿದ್ರೆ ಮಾಡುವುದು ಸೋಮಾರಿಗಳ ಲಕ್ಷಣವಲ್ಲ, ಆರೋಗ್ಯವಂತರ ಲಕ್ಷಣ ಕೂಡಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ