ಮುಂಗಾರು ಸಮಯದಲ್ಲಿ ಆರೋಗ್ಯವಾಗಿರಲು ಇಲ್ಲಿದೆ ಟಿಪ್ಸ್..

ಶುಕ್ರವಾರ, 1 ಜುಲೈ 2016 (10:29 IST)
ತಂಪೆರೆಯುವ ಮುಂಗಾರು ಇನ್ನೇನು ಶುರುವಾಗಿದೆ. ಮಳೆಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ.ಆದ್ದರಿಂದ ಸೂಕ್ತ ಅಗತ್ಯ ಎಚ್ಚರಿಕೆ ತೆಗೆದುಕೊಂಡ್ರೆ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು. ಮಾನ್ಸೂನ್‌ನಲ್ಲಿ ಹೊರಗಡೆ ಹೋದಾಗ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೇ ಅಷ್ಟೇ ಮುಖ್ಯ. ಯಾಕಂದ್ರೆ ಮಳೆಗಾಲಲ್ಲಿ ಆರೋಗ್ಯ ಸಮಸ್ಯೆಗಳು ಅತಿ ಹೆಚ್ಚು ಕಾಡುತ್ತವೆ. ಮುಂಗಾರುವಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಮುಂಗಾರು ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್.. 
* ತೇವ ಹಾಗೂ ಖುತುವಿನ ಸಮಯದಲ್ಲಿ ಸೂಕ್ಷ್ಮಾಣುಗಳಿಂದ ಹಲವು ರೋಗಗಳು ಬರುತ್ತವೆ. ಡೆಂಗ್ಯೂ,
ಮಲೇರಿಯಾ, ಡೈಫೋಡ್, ವೈರಲ್ 
 
* ಫಿವರ್ ಸಾಮಾನ್ಯವಾಗಿ ಕೋಲ್ಡ್ ಬರುತ್ತವೆ. ಆದ್ದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಲು. ಕಾಯಿಲೆ ಬರದಂತೆ ಕಾಪಾಡಲು ಇಲ್ಲಿದೆ ಟಿಪ್ಸ್..
 
* ಮಳೆಗಾಲದಲ್ಲಿ ರೇನ್ ಕೋಟ್ ತೆಗೆದುಕೊಂಡು ಬನ್ನಿ... ಇಲ್ಲಾದ್ರೆ ಕೊಡೆ ನಿಮ್ಮ ಹತ್ತಿರ ಇಟ್ಟುಕೊಂಡಿರುವುದು ಉತ್ತಮ.ಮಳೆಯಿಂದ ನಿಮ್ಮನ್ನು ರಕ್ಷಿಸಲು ಈ ಉಪಾಯಗಳನ್ನು ಮಾಡಬಹುದು. 
 
*ಅಲ್ಲದೇ ಈ ವೇಳೆಯಲ್ಲಿ ಆರೋಗ್ಯಕರವಾಗಿರುವ ಡಯೆಟ್ ಮಾಡುವುದು ಉತ್ತಮ. ಅಲ್ಲದೇ ಇದೇ ವೇಳೆ ಹಣ್ಣುಗಳನ್ನು ಹಾಗೂ 
ತರಕಾರಿಗಳನ್ನು ನಿಮ್ಮ ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತದೆ. 
 
*ವಿಟಮಿನ್ ಸಿ ಇರುವಂತಹ ಫುಡ್‌ಗಳನ್ನು ಹೆಚ್ಚಾಗಿ ಸೇವಿಸಿ.. ಇದು ನಿಮಗೆ ದೀರ್ಘಕಾಲದ ವರೆಗೆ ಸಾಮಾನ್ಯ ನೆಗಡಿ ಹಾಗ ಜ್ವರದಿಂದ ಕಾಪಾಡಬಲ್ಲದು. 
 
*ರಸ್ತೆ ಬದಿಯ ಆಹಾರಗಳನ್ನು ಎಂದಿಗೂ ಸೇವಿಸಬೇಡಿ.. ಈ ಆಹಾರಗಳು ನಿಮಗೆ ಇನ್‌ಫೆಕ್ಷನ್ ತಂದೊಡ್ಡಬಲ್ಲದ್ದು. ಅಲ್ಲದೇ ಮಾನ್ಸೂನ್ ಸಮಯದಲ್ಲಿ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಸೇವಿಸುವ ಮುಂಚಿತವಾಗಿ ಚೆನ್ನಾಗಿ ತೊಳೆಯಬೇಕು. 
 
*ಮುಂಗಾರು ವೇಳೆಯಲ್ಲಿ ಅತಿ ಹೆಚ್ಚು ನೀರನ್ನು ಕುಡಿಯಬೇಕು. ನೀವೂ ಹೊರಗಡೆ ತೆರಳುವ ಮುನ್ನ ನಿಮ್ಮ ಹತ್ತಿರ ಯಾವಾಗಲೂ ಒಂದು ಬಾಟಲ್‌ ನೀರನ್ನು ಇಟ್ಟುಕೊಳ್ಳಿ.
 
*ಇನ್ನೂ ನಿಮ್ಮ ಕೈಗಳಿಂದ ಮುಖ,ಮೂಗನ್ನು ಹಾಗೂ ಬಾಯಿಯ ಸ್ಪರ್ಶವನ್ನು ತಪ್ಪಿಸಿ. ನಿಮ್ಮ ಕೈಗಳು ತೇವದಿಂದ ಕೂಡಿದ್ರೆ  ಹಲವು ವೈರಸ್‌ಗಳು ಹರಡುವ ಸಾಧ್ಯತೆ ಇರುತ್ತದೆ. 
 
*ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ.. ಎಲ್ಲಕ್ಕಿಂತ ಹೆಚ್ಚಾಗಿ  ಮ್ಯಾಯಾಮ ಮಾಡುವುದರಿಂದ ನಿಮ್ಮಗೆ ಸ್ಟ್ರೆತ್ ನೀಡಬಲ್ಲದ್ದು. ನಿಮ್ಮ ಸುತ್ತ-ಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ