ಮಲೇರಿಯಾ ತಡೆಗಟ್ಟಲು ಮನೆ ಮದ್ದು

ಬುಧವಾರ, 26 ಏಪ್ರಿಲ್ 2017 (07:14 IST)
ಬೆಂಗಳೂರು: ಮಲೇರಿಯಾ ಮತ್ತು ಡೆಂಗ್ಯೂ ಜ್ವರವೆಂದರೆ ಮನುಷ್ಯನನ್ನು ಕಂಗೆಡಿಸಿ ಬಿಡುತ್ತದೆ. ಮಲೇರಿಯಾ ಬಾರದಂತೆ ತಡೆಗಟ್ಟಲು ಯಾವೆಲ್ಲಾ ಆಹಾರ ಸೇವಿಸಬೇಕು ಎಂದು ನೋಡೋಣ.

 
ಹುಳಿ ಮಿಶ್ರಿತ ಹಣ್ಣು
ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚು. ಜ್ವರ ಬಾರದಂತೆ ತಡೆಗಟ್ಟಲು ಈ ಹುಳಿ ಮಿಶ್ರಿತ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ.

ದ್ರಾಕ್ಷಿ
ದ್ರಾಕ್ಷಿ ತಿಂದರೆ ಶೀತವಾಗುತ್ತದೆಂದೋ, ಔಷಧ ಸಿಂಪಡಿಸುತ್ತಾರೆಂದೋ ಬಹಳ ಮಂದಿ ಸೇವಿಸುವುದು ಕಡಿಮೆ. ಆದರೆ ದ್ರಾಕ್ಷಿ ಮಲೇರಿಯಾ ರೋಗಿಗಳಿಗೆ ಇದು ಹೇಳಿ ಮಾಡಿಸಿದ ಹಣ್ಣು.

ಶುಂಠಿ
ಶೀತ, ಕೆಮ್ಮು ಇದ್ದರೆ ಆಯುರ್ವೇದ ಪದ್ಥತಿಯಲ್ಲಿ ಶುಂಠಿಯೇ ಮನೆ ಮದ್ದು. ಇದರಲ್ಲಿರುವ ಪೋಷಕಾಂಶಗಳು ದೇಹ ಮತ್ತು ಮಿದುಳಿಗೆ ಭಾರೀ ಉತ್ತಮ. ಹಲವು ರೋಗಗಳಿಗೆ ಇದು ಉತ್ತಮ ಮನೆ ಮದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ