ಮಾವಿನ ಹಣ್ಣಿನ ನೀರುಗೊಜ್ಜು ಸವಿದಿದ್ದೀರಾ...?

ಶನಿವಾರ, 11 ಜುಲೈ 2020 (08:55 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಅನ್ನದೊಂದಿಗೆ ಮಾವಿನ ಹಣ್ಣನ್ನು ತಿನ್ನುತ್ತಾರೆ. ಅದರ ಬದಲು ಮಾವಿನ ಹಣ್ಣಿನ ನೀರುಗೊಜ್ಜಿನ ಜೊತೆಗೆ ತಿಂದರೆ ಇನ್ನೂ ಉತ್ತಮವಾಗಿರುತ್ತದೆ.
 

ಬೇಕಾಗುವ ಸಾಮಾಗ್ರಿಗಳು : ಮಾವಿನ ಹಣ್ಣು 5, ಬೆಲ್ಲ 5 ಚಮಚ, ನೀರು, ಉಪ್ಪು,

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದರೊಳಗಿನ ತಿರುಳನ್ನು ತೆಗೆದಿಟ್ಟುಕೊಳ್ಳಿ. ಇದಕ್ಕೆ ನೀರು, ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಎಣ್ಣೆ, ಸಾಸಿವೆ, ಒಣಮೆಣಸಿನ ಕಾಯಿ ಹಾಕಿ ಒಗ್ಗರಣೆ ಹಾಕಿದರೆ ಮಾವಿನ ಹಣ್ಣಿನ ನೀರುಗೊಜ್ಜು ರೆಡಿ. ಇದನ್ನು ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ