ಉತ್ತುಂಗದಲ್ಲಿದ್ದಾಗ ಹೀಗೆ ಮಾಡಿದರೆ ಗರ್ಭಧಾರಣೆ ತಡೆಯಬಹುದೇ?
ಸೋಮವಾರ, 23 ಸೆಪ್ಟಂಬರ್ 2019 (09:32 IST)
ಬೆಂಗಳೂರು: ಗರ್ಭಧಾರಣೆ ತಡೆಯಲು ಹಲವು ಗರ್ಭನಿರೋಧಕ ಸಾಧನಗಳು ಲಭ್ಯವಿದೆ. ಹಾಗಿದ್ದರೂ ಅದೆಲ್ಲಾ ಬಳಸಲು ಇಷ್ಟವಿಲ್ಲದೇ ಇದ್ದಾಗ ಉದ್ರೇಕದ ಸಮಯದಲ್ಲಿ ಗುಪ್ತಾಂಗ ಹೊರಗೆಳೆದುಕೊಳ್ಳುವುದರಿಂದ ಗರ್ಭಧಾರಣೆ ತಡೆಯಬಹುದೇ?
ಕೆಲವರು ಈ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಇದು ಸಂಪೂರ್ಣ ಸುರಕ್ಷಿತ ಎಂದು ಹೇಳಿಕೊಳ್ಳಲಾಗದು. ವೀರ್ಯಾಣು ಹೊರ ಚೆಲ್ಲುವ ಮೊದಲೇ ಜನನಾಂಗ ಹೊರಗೆಳೆದುಕೊಂಡರೂ ಕೆಲವೊಮ್ಮೆ ಅರಿವಿಲ್ಲದಂತೇ ವೀರ್ಯಾಣು ಚೆಲ್ಲಿ ಗರ್ಭವತಿಯಾಗುವ ಸಾಧ‍್ಯೆಯೂ ಇಲ್ಲದಿಲ್ಲ. ಹೀಗಾಗಿ ಸುರಕ್ಷಿತ ಗರ್ಭನಿರೋಧಕ ಬಳಸುವುದೇ ಒಳ್ಳೆಯದು.