ನಿಯಮಿತ ವ್ಯಾಯಾಮದಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು..!

ಮಂಗಳವಾರ, 7 ಸೆಪ್ಟಂಬರ್ 2021 (07:18 IST)
ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು, ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಎಷ್ಟು ಗಂಟೆಯ ವ್ಯಾಯಾಮ ಮುಖ್ಯ ಎಂದು ತಿಳಿದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಓದಿರಿ.

ನೀವು ಅತಿಯಾದ ದೇಹದ ತೂಕದಿಂದ ಬೇಸತ್ತು, ಅದನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಕಸರತ್ತುಗಳನ್ನು ಮಾಡುತ್ತಿದ್ದರೂ ನಿಮ್ಮ ತೂಕ ಕಡಿಮೆ ಆಗುತ್ತಿಲ್ಲವೇ?  ತುಂಬಾ ಜನರು ತಮಗೆ ಇಷ್ಟವಾದ ಆಹಾರ ತಿನ್ನುವುದನ್ನು ಬಿಡುತ್ತಾರೆ. ಮತ್ತೆ ಕೆಲವರು ದಿನದಲ್ಲಿ ಎರಡು ಬಾರಿ ವ್ಯಾಯಾಮ ಮಾಡುತ್ತಾರೆ. ಆದರೂ, ಅವರ ದೇಹದ ತೂಕ ಕಡಿಮೆ ಆಗುವುದಿಲ್ಲ. ತುಂಬಾ ಜನರು ದಿನಕ್ಕೆ ಎರಡು ಬಾರಿ ಜಿಮ್ಗೆ ಹೋಗಿ ಕಠಿಣವಾದ ತಾಲೀಮು ಮಾಡುತ್ತಾರೆ. ಆದರೂ ಅವರ ದೇಹದ ತೂಕ ಕಡಿಮೆ ಆಗುವುದಿಲ್ಲ. ಏನು ಮಾಡಿದರೆ ಹಾಗೂ ದಿನಕ್ಕೆ ಎಷ್ಟು ತಾಸುಗಳ ಕಾಲ ವ್ಯಾಯಾಮ ಮಾಡುವುದರಿಂದ ಫಿಟ್ನೆಸ್ ಕಾಯ್ದುಕೊಳ್ಳಬಹುದು ಎಂದು ಎಲ್ಲರಲ್ಲಿಯೂ  ಗೊಂದಲವಿರುತ್ತದೆ. ಈ ಗೊಂದಲಕ್ಕೆ ಉತ್ತರ ಇಲ್ಲಿದೆ.
ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು, ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಎಷ್ಟು ಗಂಟೆಯ ವ್ಯಾಯಾಮ ಮುಖ್ಯ ಎಂದು ತಿಳಿದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಓದಿರಿ...
ತೂಕ ಇಳಿಸಲು ವ್ಯಾಯಾಮ
ದೇಹದ ತೂಕ ಕಡಿಮೆ ಮಾಡಿಕೊಳ್ಳುವ ವಿಷಯಕ್ಕೆ ಬಂದರೆ, ನಾವು ಸೇವಿಸುವಂತಹ ಆಹಾರ, ನಮ್ಮ ಚಯಾಪಚಯ ಕ್ರಿಯೆ ಮತ್ತು ನಾವು ಆಯ್ಕೆ ಮಾಡಿಕೊಳ್ಳುವಂತಹ ವ್ಯಾಯಾಮ ಇವೆಲ್ಲವೂ ತುಂಬಾ ಮುಖ್ಯವಾಗಿರುತ್ತವೆ.
ಹೆಚ್ಚಿನ ತೀವ್ರತೆಯ ತಾಲೀಮಿಗಿಂತಲೂ ಮಧ್ಯಮ ತೀವ್ರತೆಯ ತಾಲೀಮು ಕಡಿಮೆ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಪ್ರಕಾರ 18 ರಿಂದ 64 ವರ್ಷ ವಯಸ್ಸಿನವರಿಗೆ ಪ್ರತಿ ವಾರ 75 ನಿಮಿಷಗಳ ತೀವ್ರ ತಾಲೀಮು ಮತ್ತು 150 ನಿಮಿಷಗಳ ಮಧ್ಯಮ ತಾಲೀಮನ್ನು ಶಿಫಾರಸು ಮಾಡುತ್ತದೆ.
ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ಸೆಂಟರ್ ಪ್ರಕಾರ ಒಂದು ವಾರಕ್ಕೆ ಮೂರು ದಿನಗಳು 20 ನಿಮಿಷಗಳ ತೀವ್ರ ತಾಲೀಮನ್ನು ಶಿಫಾರಸು ಮಾಡುತ್ತದೆ. ಮತ್ತು ಮಧ್ಯಮ ತಾಲೀಮಿಗಾಗಿ ವಾರದಲ್ಲಿ ಐದು ದಿನ 30 ನಿಮಿಷಗಳ ವ್ಯಾಯಾಮವನ್ನು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ ಎಂದು ಹೇಳುತ್ತದೆ.
ಆರೋಗ್ಯಕರ ಬಿಎಂಐ ಅನ್ನು ಕಾಪಾಡಿಕೊಂಡು ತೂಕ ಇಳಿಸುವ ಅಧ್ಯಯನಗಳು ತಾಲೀಮನ್ನು ದ್ವಿಗುಣಗೊಳಿಸಲು ಶಿಫಾರಸು ಮಾಡುತ್ತದೆ. ಆದ್ದರಿಂದ ಒಮ್ಮೆ ನೀವು ಅಂದುಕೊಂಡ ತೂಕದ ಗುರಿ ಸಾಧಿಸಿದ ನಂತರ, ಒಂದು ವಾರದಲ್ಲಿ 150 ನಿಮಿಷಗಳ ತೀವ್ರ ತಾಲೀಮು ಮತ್ತು ಐದು ದಿನ 300 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಅಭ್ಯಾಸ ಮಾಡಿಕೊಳ್ಳಿ.
ಸ್ನಾಯುಗಳ ಬಲಪಡಿಸುವಿಕೆಗೆ ತಾಲೀಮು
ನಿಮ್ಮ ಸ್ನಾಯುಗಳನ್ನು ಬಲಪಡಿಸಿಕೊಳ್ಳುವುದಕ್ಕೆ ಅಗತ್ಯವಿರುವ ತಾಲೀಮಿನ ಪ್ರಮಾಣವು ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ನಿಮಗೆ ಯಾವ ಭಾಗದ ಸ್ನಾಯುಗಳನ್ನು ಬಲಪಡಿಸಿಕೊಳ್ಳಬೇಕು ಎಂಬುದರ ಆಧಾರದ ಮೇಲೆ ವ್ಯಾಯಾಮ ಕ್ರಮವನ್ನು ನೀವು ರೂಢಿಸಿಕೊಳ್ಳಬೇಕಾಗುತ್ತದೆ.
ನಿಮ್ಮ ಪೂರ್ತಿ ದೇಹದಲ್ಲಿರುವಂತಹ ಸ್ನಾಯುಗಳನ್ನು ಬಲಪಡಿಸಿಕೊಳ್ಳಬೇಕೆಂದರೆ ನೀವು ಬೇರೆಯದೇ ವ್ಯಾಯಾಮ ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ನೀವು ಮಾಡುವಂತಹ ವ್ಯಾಯಾಮಗಳ ಮಧ್ಯೆ ಕೆಲವು ದಿನಗಳ ವಿಶ್ರಾಂತಿ ಪಡೆಯುವುದು ಸಹ ಉತ್ತಮವಾದ ಫಲಿತಾಂಶ ನೀಡುತ್ತದೆ.
ಒಟ್ಟಿನಲ್ಲಿ ಪ್ರತಿದಿನ ತುಂಬಾ ಸಲ ವ್ಯಾಯಾಮ ಮಾಡುವುದಕ್ಕಿಂತಲೂ ಸರಿಯಾದ ಕ್ರಮ ಅನುಸರಿಸಿದರೆ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಸಂದೇಹವೇ ಇಲ್ಲ ಎಂಬುದು ತಜ್ಞರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ