ಲೈಂಗಿಕ ಕ್ರಿಯೆಯ ಬಳಿಕ ಗುಪ್ತಾಂಗದಲ್ಲಿ ವಾಸನೆ ಬರಲು ಕಾರಣವೇನು ಗೊತ್ತಾ?
ಭಾನುವಾರ, 19 ಜನವರಿ 2020 (06:43 IST)
ಬೆಂಗಳೂರು : ದಂಪತಿಗಳ ನಡುವೆ ಲೈಂಗಿಕತೆ ಹೊಂದುವ ವೇಳೆ ಲ್ಯೂಬ್ರಿಕೆಂಟ್ಸ್ ಸ್ರಾವವಾಗುವುದು ಸಹಜ. ಇದು ಕೆಲವೊಮ್ಮೆ ಗುಪ್ತಾಂಗದಲ್ಲಿ ವಾಸನೆ ಬರಲು ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆನೆಂಬುದನ್ನು ಇಲ್ಲಿದೆ ನೋಡಿ.
ಇದಕ್ಕೆ ಮುಖ್ಯ ಕಾರಣ ಗುಪ್ತಾಂಗದಲ್ಲಿರುವ ಬ್ಯಾಕ್ಟೀರಿಯಾ. ಗುಪ್ತಾಂಗದ ಸುತ್ತಲೂ ಹಲವಾರು ಬ್ಯಾಕ್ಟೀರಿಯಾಗಳಿರುತ್ತದೆ. ಲೈಂಗಿಕ ಕ್ರಿಯೆಯ ವೇಳೆ ಬಿಳಿ ದ್ರವ ಬಿಡುಗಡೆಯಾಗುತ್ತದೆ. ಅದರಲ್ಲಿ ಬ್ಯಾಕ್ಟೀರಿಯಾಗಳು ಸೇರಿ ವಾಸನೆಗೆ ಕಾರಣವಾಗುತ್ತದೆ.
ಇನ್ನೊಂದು ಕಾರಣ ಲೈಂಗಿಕವಾಗಿ ಹರಡುವ ರೋಗಗಳು. ಇದಕ್ಕೆ ಹೆಚ್ಚಾಗಿ ಮಹಿಳೆಯರು ತುತ್ತಾಗುತ್ತಾರೆ. ಮಹಿಳೆಯರಲ್ಲಿ ಕಾಡುವ ಲೈಂಗಿಕ ರೋಗವೆಂದರೆ ಅದು ಟ್ರೈಕೊಮೋನಿಯಾಸಿಸ್. ಇದು ಲೈಂಗಿಕತೆಯ ನಂತರ ಗುಪ್ತಾಂಗದ ವಾಸನೆಗೆ ಕಾರಣವಾಗುತ್ತದೆ.