ವಯಸ್ಸಾದವರು ಈ ಕಾರಣಕ್ಕೆ ಮಜ್ಜಿಗೆ ಕುಡಿಯಲೇ ಬೇಕು!

ಶನಿವಾರ, 13 ಮೇ 2017 (08:48 IST)
ಬೆಂಗಳೂರು: ವಯಸ್ಸಾದ ಹಿರಿಯರು ಆಹಾರದಲ್ಲಿ ಏನು ಪಥ್ಯ ಮಾಡಿದರೂ, ಮಜ್ಜಿಗೆ ಕುಡಿಯುವುದನ್ನು ಮಾತ್ರ ತಪ್ಪಿಸಬಾರದಂತೆ! ಹಾಗಂತ ತಜ್ಞರು ಕಂಡುಕೊಂಡಿದ್ದಾರೆ.

 
ಮಜ್ಜಿಗೆ ಸೇವಿಸಿದಷ್ಟು ಹಿರಿಯ ನಾಗರಿಕರಲ್ಲಿ ಅಸ್ಥಿರಂಧ್ರತೆ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾದರೆ ಅಸ್ಥಿರಂಧ್ರತೆ ಎಂದರೆ ಏನು ಎಂದು ತಿಳಿದುಕೊಳ್ಳೋಣ.

ಎಲುಬು ಬಲ ಕಳೆದುಕೊಳ್ಳುವುದು, ಎಲುಬು ಸವೆತದಂತಹ ಸಮಸ್ಯೆಗಳಿಗೆ ಒಟ್ಟಾಗಿ ಅಸ್ಥಿರಂಧ್ರತೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮಧ್ಯವಯಸ್ಸು ದಾಟಿದವರಲ್ಲಿ ಇಂತಹ ಸಮಸ್ಯೆ ಸಾಮಾನ್ಯ. ಹಾಗಾಗಿ ಕ್ಯಾಲ್ಶಿಯಂ ಅಧಿಕವಿರುವ ಆಹಾರ ಸೇವನೆ ಉತ್ತಮ.

ಮಜ್ಜಿಗೆಯಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಿರುವುದರಿಂದ ಹಿರಿಯರು ಈ ಪಾನೀಯವನ್ನು ಆದಷ್ಟು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ವಿದೇಶಿ ವೈದ್ಯರ ತಂಡ ಸಾವಿರಾರು ಮಹಿಳೆಯರು ಮತ್ತು ಪುರುಷ ಹಿರಿಯ ನಾಗರಿಕರ ಸರ್ವೇ ಮಾಡಿ ಇಂತಹದ್ದೊಂದು ಸತ್ಯ ಕಂಡುಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ