ಬೆಂಗಳೂರು: ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ನಮಗೆಲ್ಲರಿಗೂ ಸಾಮಾನ್ಯವಾಗಿ ಇದ್ದೇ ಇದೆ. ಇದು ನಮ್ಮ ಜೀವನದ ಭಾಗವೇ ಆಗಿದೆ. ಹಾಗಾದರೆ ರಾತ್ರಿ ಹಾಲು ಕುಡಿಯುವುದು ಎಷ್ಟು ಉತ್ತಮ?
ಹಾಲು ಸೇವಿಸಿದರೆ ಕಫ ಹೆಚ್ಚಾಗುತ್ತದೆ, ದಪ್ಪಗಾಗ್ತಾರೆ ಎಂದೆಲ್ಲಾ ನಂಬಿಕೆಗಳಿವೆ. ಇದೆಲ್ಲಾ ತಪ್ಪು ಕಲ್ಪನೆ. ತಜ್ಞರ ಪ್ರಕಾರ ರಾತ್ರಿ ಹಾಲು ಸೇವಿಸಬಾರದು ಎಂದಿಲ್ಲ.
ಇದು ಒಂದು ಉತ್ತಮ ಹವ್ಯಾಸವೇ. ರಾತ್ರಿ ಮಲಗುವ ಮೊದಲು ಒಂದು ಲೋಟ ಹದ ಬಿಸಿ ಹಾಲಿಗೆ ಸ್ವಲ್ಪ ಅರಶಿನ ಪುಡಿ, ಏಲಕ್ಕಿ ಪುಡಿ ಹಾಗೂ ಸಿಹಿ ಬೇಕಿದ್ದರೆ, ಸ್ವಲ್ಪ ಕಲ್ಲು ಸಕ್ಕರೆ ಹಾಕಿಕೊಂಡು ಕುಡಿಯಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು, ರಾತ್ರಿ ಸುಖ ನಿದ್ದೆಗೂ ಸಹಾಯಕ ಎನ್ನುವುದು ತಜ್ಞರ ಅಭಿಮತ.