ಊಟ ಮಾಡಿದ ತಕ್ಷಣ ಮಾಡುವ ಈ ಅಭ್ಯಾಸಗಳನ್ನು ಬಿಟ್ಟುಬಿಡಿ

ಸೋಮವಾರ, 29 ಅಕ್ಟೋಬರ್ 2018 (14:21 IST)
ಬೆಂಗಳೂರು :ಊಟ ಮಾಡಿದ ಮೇಲೆ ನಾವು ಮಾಡುವ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಹಾಳುಮಾಡುತ್ತವೆ. ಆದಕಾರಣ ಊಟವಾದ ಮೇಲೆ ಯಾವುದೇ ಕಾರಣಕ್ಕೂ ಇವುಗಳನ್ನು ಮಾಡಬೇಡಿ.


*ಊಟ ಮಾಡಿದ ತಕ್ಷಣ ಟೀ ಕುಡಿಯಬಾರದು ಬಾರದು . ಯಾಕೆಂದರೆ ಟೀ ಕುಡಿದರೆ ಅಧಿಕ ಪ್ರಮಾಣದಲ್ಲಿ ಆಸಿಡ್ ಬಿಡುಗಡೆಯಾಗಿ ಜೀರ್ಣ ಕ್ರಿಯೆ ಸರಿಯಾಗಿ ನಡೆಯಲು ಬಿಡುವುದಿಲ್ಲ.


* ಊಟದ ನಂತರ ನಡೆಯುವುದು ಒಳ್ಳೆಯದು ಆದರೆ ತಕ್ಷಣ ನಡೆಯಬೇಡಿ 30 ನಿಮಿಷ ವಿಶ್ರಮಿಸಿ ನಂತರ ನಡೆಯ ಬಹುದು, ಕಾರಣ ಇಲ್ಲೂ ಸಹ ಅತಿಯಾಗಿ ಆಸಿಡ್ ಬಿಡುಗಡೆ ಗೊಂಡು ಹೊಟ್ಟೆ ಹುರಿಗೆ ಕಾರಣವಾಗುತ್ತದೆ.


*ಕೆಲವರಿಗೆ ಊಟ ಮಾಡಿದ ನಂತರ ಹೊಟ್ಟೆಗೆ ಕಟ್ಟಿಕೊಂಡ ಡ್ರೆಸ್ ನ್ನು ಸಡಿಲ ಮಾಡುವ ಅಭ್ಯಾಸವಿರುತ್ತದೆ. ಹೀಗೆ ಮಾಡಿದರೆ ಇದರಿಂದ ಎಲ್ಲಾದರು ಸ್ಥಗಿತಗೊಂಡಿರುವ ಆಹಾರವು ಕೆಳಗೆ ಬರುವುದಿಲ್ಲ ಇದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ.


* ಊಟದ ಬಳಿಕ ಸ್ನಾನ ಮಾಡಬಾರದು ಹಾಗೆ ಮಾಡಿದರೆ, ರಕ್ತವೆಲ್ಲವೂ ಕಾಲುಗಳಿಗೆ, ಕೈಗಳಿಗೆ ಒಟ್ಟು ದೇಹಕ್ಕೆಲ್ಲ ಹರಿದು, ಹೊಟ್ಟೆ ಹತ್ತಿರ ರಕ್ತವು ಕಡಿಮೆಯಾಗಿ, ಜೀರ್ಣ ಪ್ರಕ್ರಿಯೆಯು ನಿಧಾನವಾಗುತ್ತದೆ ಇದರಿಂದ ಜೀರ್ಣ ವ್ಯವಸ್ಥೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.


* ಕೆಲವರಿಗೆ ತಿಂದ ತಕ್ಷಣ ಮಲಗುವ ಕೆಟ್ಟ ಅಭ್ಯಾಸ ಇರುತ್ತದೆ ಇಂತವರಿಗೆ ಅನಾರೋಗ್ಯ ಕಟ್ಟಿಟ್ಟ ಬಿತ್ತಿ, ತಿಂದ ತಕ್ಷಣ ಮಲಗಿದರೆ ಆಹಾರ ಜೀರ್ಣ ಸರಿಯಾಗಿ ಆಗುವುದಿಲ್ಲ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ