ಸಂಶೋಧನೆಯ ಪ್ರಕಾರ ರಾತ್ರಿ 8ರಿಂದ 10 ಗಂಟೆಯ ಒಳಗೆ ಯಾರು ನಿದ್ದೆ ಮಾಡುತ್ತಾರೋ ಅವರ ವೀರ್ಯಾಣು ಉತ್ಪಾದನೆ ಉತ್ತಮವಾಗಿರುತ್ತದೆಯಂತೆ. ರಾತ್ರಿ ಉತ್ಪಾದನೆಯಾಗುವ ವೀರ್ಯಾಣುಗಳು ಅಂಡಾಣುವನ್ನು ಫಲವತ್ತೆಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆಯಂತೆ. ಪುರುಷರ ಟೆಸ್ಟ್ರಾಸ್ಟೋಮ್ ಹಾಗೂ ಬೆಳೆವಣಿಗೆಯ ಹಾರ್ಮೋನ್ ಇದು ಹೆಚ್ಚಾಗಿ ನಿದ್ರೆ ಸಮಯದಲ್ಲಿಹೆಚ್ಚು ಉತ್ಪಾದನೆಯಾಗುತ್ತದೆ. ಒಂದು ವೇಳೆ ಸರಿಯಾಗಿ ನಿದ್ದೆ ಮಾಡದಿದ್ದರೆ ನಮ್ಮ ವೀರ್ಯಾಣು ಗುಣಮಟ್ಟ ಹಾಳಾಗುತ್ತದೆಯಂತೆ.