ಬೇಕಾಬಿಟ್ಟಿ ಮಲಗುವ ಮುನ್ನ ಯೋಚಿಸಿ…!

ಗುರುವಾರ, 6 ಜುಲೈ 2017 (08:51 IST)
ಬೆಂಗಳೂರು: ಸಿಕ್ಕಾಪಟ್ಟೆ ಸುಸ್ತಾದಾಗ ನಾವು ಹೇಗೆ ಮಲಗುತ್ತೇವೆಂದು ನಮಗೇ ಗೊತ್ತಿರುವುದಿಲ್ಲ. ಕೆಲವರು ಅದು ಹೇಗೇಗೋ ಭಂಗಿಯಲ್ಲಿ ನಿದ್ರೆ ಮಾಡುತ್ತಾರೆ. ಆದರೆ ನಾವು ಮಲಗುವ ಭಂಗಿ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತದೆ ಎಂದರೆ ನೀವು ನಂಬಲೇಬೇಕು.


ಕುತ್ತಿಗೆ ನೋವು
ಇದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ನಾವು ಮಲಗುವಾಗ ಸ್ವಲ್ಪ ಭಂಗಿ ಹೆಚ್ಚು ಕಮ್ಮಿಯಾದರೂ ಕುತ್ತಿಗೆ ನೋವು ಬರುವುದು ಸಹಜ. ಅಂಗಾತ ಮಲಗುವಾಗ ನಾವು ಉಪಯೋಗಿಸುವ ತಲೆದಿಂಬಿನ ಎತ್ತರ ಹೆಚ್ಚಿದ್ದರೂ ಕುತ್ತಿಗೆ ನೋವು ಬರಬಹುದು.

ಸಶಬ್ಧ ಉಸಿರಾಟ
ಅಂಗಾತ ಮಲಗಿದಾಗ ಗೊರಕೆ ಹೊಡೆಯುವ ಸಂಭವ ಹೆಚ್ಚು. ಈ ರೀತಿ ಮಲಗಿದಾಗ ಸಾಕಷ್ಟು ಉಸಿರಾಟಕ್ಕೆ ಗಾಳಿ ಸಿಗದೇ ಸಶಬ್ಧವಾಗಿ ಉಸಿರಾಡಿ ಇತರರಿಗೆ ಕಿರಿ ಕಿರಿಯಾಗಬಹುದು.

ಭಯಾನಕ ಕನಸು
ರಾತ್ರಿ ಹೊತ್ತು ಬೆಚ್ಚಿ ಬೀಳಿಸುವ ಕನಸು ಕಾಣುವುದಕ್ಕೂ ಮಲಗುವ ಭಂಗಿಗೂ ಸಂಬಂಧವಿದೆ. ಎಡಬದಿಗೆ ಹೊರಳಿ ಮಲಗುವವರಿಗೆ ಹೆಚ್ಚು ಭಯಾನಕ ಕನಸು ಬೀಳುತ್ತದೆಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಮರೆವಿನ ರೋಗ
ಒಂದು ಬದಿಗೆ ಹೊರಳಿ ಮಲಗುವುದರಿಂದ ಮರೆವಿನ ಖಾಯಿಲೆ ಅಥವಾ ನರ ಸಂಬಂಧೀ ರೋಗಗಳು ಬರುವ ಸಾಧ್ಯತೆ ಕಡಿಮೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಅಂದರೆ ನಿದ್ರಿಸುವ ಭಂಗಿಗೂ ನಮ್ಮ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ ಅಂತಾಯ್ತು.

ಹೃದಯ ಖಾಯಿಲೆ
ಅಸಹಜ ನಿದ್ರಾ ಭಂಗಿಯಿಂದ ಹೃದಯ ಸಂಬಂಧೀ ರೋಗಗಳೂ ಬರಬಹುದು. ನೀವು ಯಾವ ರೀತಿ ಮಲಗುತ್ತೀರೋ ಅದರಂತೆ ನಿಮ್ಮ ದೇಹದಲ್ಲಿ ರಕ್ತ ಸಂಚಾರವಿರುತ್ತದೆ. ಅಸಹಜ ಭಂಗಿಯಲ್ಲಿ ನಿದ್ರಿಸುವುದರಿಂದ ರಕ್ತ ಸಂಚಾರ ನಿಧಾನವಾಗಬಹುದು ಅಥವಾ ಸುಗಮ ಸಂಚಾರಕ್ಕೆ ತೊಂದರೆಯಾಗಬಹುದು. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರಬಹುದು.

ಇದನ್ನೂ ಓದಿ.. ಬೇಗನೇ ಮಗು ಪಡೆಯುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ