ಸೌತೆಕಾಯಿಯನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ? ವರ್ಷಪೂರ್ತಿ ಕಡಿಮೆ ದರದಲ್ಲಿ ದೊರೆಯುವದಲ್ಲದೇ ಸತ್ವಯುತವಾಗಿರುತ್ತದೆ. ಸೌತೆಕಾಯಿಯಲ್ಲಿ ನೀರಿನ ಅಂಶ, ವಿಟಮಿನ್ ಕೆ, ಸಿಲಿಕಾ, ವಿಟಮಿನ್ ಎ ,ವಿಟಮಿನ್ ಸಿ ಮತ್ತು ಕ್ಲೋರೋಫಿಲ್ ಎನ್ನುವ ಅಂಶವಿರುತ್ತದೆ.
ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ಪಚನ ಕ್ರಿಯೆ ಸುಲಭವಾಗುತ್ತದೆ.
ಸೌತೆಕಾಯಿಯಲ್ಲಿ ಸಕ್ಕರೆ, ಬಿ ವಿಟಮಿನ್, ಎಲೆಕ್ಟ್ರೋಲೈಟ್ಸ್ ಇರುವುದರಿಂದ ಹ್ಯಾಂಗೋವರ್ ಡ್ರಿಂಕ್ಸ್‌ನಿಂದ ಬಳಲುತ್ತಿರುವರಿಗೆ ನಿರಾಳತೆ ನೀಡುತ್ತದೆ.