ಬೆಂಗಳೂರು : ಹೆಚ್ಚಿನವರು ಬಿಸಿ ನೀರನ್ನು ಆರಿಸಿ ಕುಡಿಯುತ್ತಾರೆ. ಇನ್ನು ಕೆಲವರು ಬಿಸಿ ಬಿಸಿ ನೀರನ್ನು ಕುಡಿಯುತ್ತಾರೆ. ಆದರೆ ಈ ಸಮಸ್ಯೆ ಇರುವವರು ದಯವಿಟ್ಟು ಬಿಸಿ ನೀರನ್ನು ಕುಡಿಯಬೇಡಿ.
ಆ್ಯಸಿಡಿಟಿ, ಎದೆ ಉರಿ, ಹೊಟ್ಟೆಯಲ್ಲಿ ಹುಳಿ ತೇಗು ಬರುತ್ತಿದ್ದರೆ ಅಂತವರು ಬಿಸಿನೀರು ಕುಡಿಯಬೇಡಿ. ಪಿತ್ತ ಆಗಿದ್ದರೆ ಬಿಸಿ ನೀರು ಸೇವಿಸಬಾರದು, ಹಾಗೇ ಜ್ವರ ಬಂದಾಗ ಬಿಸಿ ನೀರನ್ನು ಕುಡಿಯಬಾರದು ಇದರಿಂದ ದೇಹದ ಉಷ್ಣತೆ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಬಿಸಿ ನೀರನ್ನು ಆರಿಸಿ ಕುಡಿಯಿರಿ.
ಹಾಗೇ ಬಾಯಿಯಲ್ಲಿ ಉಷ್ಣದ ಗುಳ್ಳೆಗಳಾಗಿದ್ದರೆ ಬಿಸಿನೀರನ್ನು ಕುಡಿಯಬೇಡಿ. ಇದರಿಂದ ಗುಳ್ಳೆಗಳು ಬೇಗ ವಾಸಿಯಾಗುವುದಿಲ್ಲ. ಅಲ್ಲದೇ ತುಂಬಾ ಬಾಯಾರಿಕೆಯಾಗಿ ಬಾಯಿ ಒಣಗುತ್ತಿದ್ದರೆ ಬಿಸಿ ನೀರನ್ನು ಕುಡಿಯಬೇಡಿ.