ಗರ್ಭಿಣಿಯರು ದಯಮಾಡಿ ಇಲ್ಲಿ ಸ್ವಲ್ಪ ಕೇಳಿ..!!

ಮಂಗಳವಾರ, 6 ಜೂನ್ 2017 (09:29 IST)
ಬೆಂಗಳೂರು: ಗರ್ಭಿಣಿ ಮಹಿಳೆಯರೆಂದರೆ ತಲೆಗೊಂದು ಸಲಹೆ ಕೊಡುವವರು ಸಾವಿರಾರು ಮಂದಿ ಇರುತ್ತಾರೆ. ಹೀಗಿರುವಾಗ ಗರ್ಭಿಣಿ ಮಹಿಳೆ ಯಾವುದನ್ನು ತೆಗೆದುಕೊಳ್ಳಬೇಕು, ಹೇಗಿರಬೇಕೆಂಬ ಗೊಂದಲದಲ್ಲಿ ಒತ್ತಡಕ್ಕೊಳಗಾಗುವುದು ಸಹಜ.

 
ಇಂತಹ ಒತ್ತಡಗಳಿಂದ ಹೊರಬರುವುದು ಹೇಗೆ? ಅದಕ್ಕೆ ಒಂದಷ್ಟು ನಿಯಮಗಳನ್ನು ಹಾಕಿಕೊಳ್ಳಿ. ಗರ್ಭಿಣಿಯರು ಒತ್ತಡ ಮರೆಯಲು ಕೆಲವೊಂದು ಸಲಹೆ ಇಲ್ಲಿವೆ ನೋಡಿ.

·         ಮೊದಲು ನೀವು ಒತ್ತಡದಲ್ಲಿರಲು ಕಾರಣ ಏನೆಂದು ಪತ್ತೆ ಮಾಡಿ. ಅದರಿಂದ ಒತ್ತಡವನ್ನು ಕಡಿಮೆ ಮಾಡಬಹುದು.
·         ವಾಕಿಂಗ್ ನಂತಹ ಸರಳ ದೈಹಿಕ ಕಸರತ್ತು ಮಾಡಿ.
·         ತಲೆಗೊಂದು ಸಲಹೆ ಕೊಡುವವರಿದ್ದರೆ ಎಲ್ಲವನ್ನೂ ಕಿವಿ ಮೇಲೆ ಹಾಕಿಕೊಳ್ಳಬೇಡಿ. ಬೇಕಾದಾಗ ಮಾತ್ರ ಸಲಹೆಗಾರರ ಸಹಾಯ ಪಡೆದರೆ ಸಾಕು.
·         ವೈದ್ಯರ ಸಲಹೆ ಪಡೆದು ಒಂದು ಸಣ್ಣ ಪಿಕ್ ನಿಕ್ ಅಥವಾ ಔಟಿಂಗ್ ಮಾಡಿ.
·         ಗರ್ಭಾವಸ್ಥೆಯ ಬಗ್ಗೆ ಹಲವು ಪುಸ್ತಕಗಳನ್ನು ಓದಿ, ಕತೆ ಕೇಳಿ ತಲೆಕೆಡಿಸಿಕೊಳ್ಳಿ. ಒಬ್ಬರ ಅನುಭವ ಇನ್ನೊಬ್ಬರದ್ದಾಗಿರಬೇಕೆಂದೇನಿಲ್ಲ.
·         ಒಳ್ಳೆಯ, ನಿಮಗಿಷ್ಟವಾದ ಆಹಾರ ಸೇವಿಸುತ್ತಿರಿ. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗುತ್ತೀರಿ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ