ಚಳಿಗಾಲದ ಸಮಯದಲ್ಲಿ ವ್ಯಾಯಾಮ ಹೇಗಿರಬೇಕು?

ಗುರುವಾರ, 2 ಡಿಸೆಂಬರ್ 2021 (06:51 IST)
ಚಳಿಗಾಲ ಅಂದಾಕ್ಷಣ ಸಾಮಾನ್ಯವಾಗಿ ಜಡತ್ವ ಕಾಣಿಸಿಕೊಳ್ಳುವುದು ಸಹಜ. ಚಳಿಗೆ ಮೈ ನಡುಕ ಅನ್ನುತ್ತಾ ರಾತ್ರಿ ಮಲಗಿದರೆ ಬೆಳಗ್ಗೆ 8 ಗಂಟೆಯಾದರೂ ಎಚ್ಚರವೇ ಆಗುವುದಿಲ್ಲ.
ಬೆಚ್ಚಗಿನ ಬೆಡ್ ಶೀಟ್ ಹೊದ್ದು ಇನ್ನೂ ಮಲಗಬಾರದೇ ಅನಿಸುತ್ತದೆ. ಈ ಜಡತ್ವ ಮತ್ತು ಆಲಸ್ಯವನ್ನು ಹೋಗಲಾಡಿಸಲು ನಿಯಮಿತವಾದ ವ್ಯಾಯಾಮ ಬೇಕೇಬೇಕು. ಅದರಲ್ಲಿಯೂ ಮುಖ್ಯವಾಗಿ ಚಳಿಗಾಲದ ಸಮಯದಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಪ್ರತಿನಿತ್ಯವೂ ನೀವು ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.
ಮಾನಸಿಕ ಸ್ಥಿತಿ
ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡುವುದರಿಂದ ನಿಮ್ಮ ಮಾನಸಿಕ ಸ್ಥಿತಿ ಸುಧಾರಣೆಯಾಗುತ್ತದೆ. ಹಾಗಾಗಿ ನೀವು ಚಳಿಗಾಲದ ಸಮಯದಲ್ಲಿ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.
ದಿರ್ಘ ನಿದ್ರೆ
ಚಳಿಯಲ್ಲಿ ಬೆಳಗ್ಗೆ 8 ಗಂಟೆಯಾದರೂ ಎಚ್ಚರವಾಗುವುದಿಲ್ಲ. ಇನ್ನೊಂದೆರಡು ಬೆಡ್ ಶೀಟ್ ಹೊದ್ದು ಬೆಚ್ಚಗೆ ಮಲಗುವುದು ಲೇಸು ಅನ್ನುವಷ್ಟು ಜಡತ್ವ. ದೀರ್ಘ ನಿದ್ರೆ, ಆಲಸ್ಯ. ಹೀಗಿರುವಾಗ ನೀವು ವ್ಯಾಯಾಮ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ಏಳುವ ಅಭ್ಯಾಸ ಮಾಡುತ್ತೀರಿ. ಇದು ನಿಮ್ಮ ಸೋಮಾರಿತನವನ್ನು ದೂರತಳ್ಳುತ್ತದೆ.
ಊಟ ಮಾಡದೇ ಇರುವುದು
ಪ್ರತಿನಿತ್ಯ ವ್ಯಾಯಾಮ ಮಾಡಲೇಬೇಕು ಎಂಬುದು ಅನಿವಾರ್ಯವೇನಲ್ಲ. ಆದರೆ ಆರೋಗ್ಯ ಸುಧಾರಿಸಲು ನಿಯಮಿತವಾದ ವ್ಯಾಯಾಮ ರೂಢಿಯಲ್ಲಿರುವುದು ಒಳ್ಳೆಯದು. ಅಷ್ಟೇ ಮುಖ್ಯವಾಗಿ ದೇಹಕ್ಕೆ ವಿಶ್ರಾಂತಿಯೂ ಬೇಕು. ನೀವು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಇದರಿಂದ ತೂಕ ಇಳಿಸಿಕೊಳ್ಳಲು ವ್ಯಾಯಾಮ ಒಳ್ಳೆಯ ಆಯ್ಕೆ.
ವ್ಯಾಯಾಮದ ಆಯ್ಕೆ
ಚಳಿಗಾಲದ ಸಮಯದಲ್ಲಿ ಬಿಸಿಲು ಕಡಿಮೆ. ಈ ಸಮಯದಲ್ಲಿ ನಿಮ್ಮನ್ನು ಬೆಚ್ಚಗಿರಿಸಲು ವ್ಯಾಯಾಮ ಸಹಾಯ ಮಾಡುತ್ತದೆ. ಹಾಗಿರುವಾಗ ನೀವು ಇಷ್ಟಪಡುವ ವ್ಯಾಯಾಮ ಭಂಗಿಗಳನ್ನು ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಂಡರೆ ಚಳಿಗಾಲದ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ