ಶನಿವಾರ, 13 ಜೂನ್ 2020 (16:02 IST)
ನಿಮಗೆ ಆಗಾಗ ತೇಗು ಬರುತ್ತಿದ್ದರೆ ಮನೆಯಲ್ಲಿರುವ ವಸ್ತುಗಳಿಂದ ಮನೆಮದ್ದು ತಯಾರಿಸಿ ತೇಗಿನ ಸಮಸ್ಯೆಯಿಂದ ದೂರ ಇರಿ.
ಪದೇ ಪದೇ ತೇಗು ಬರುತ್ತಿದ್ದರೆ ಬೆಲ್ಲ ಹಾಗೂ ಒಣ ಶುಂಠಿಯನ್ನು ನೀರಿನಲ್ಲಿ ಕಲಸಿ 1-2 ಹನಿಗಳನ್ನು ಮೂಗಿನಲ್ಲಿ ಹಾಕುತ್ತಿರಬೇಕು.
ಒಂದರಿಂದ ಮೂರು ಗ್ರಾಂ ಅಳಲೆ ಚೂರ್ಣ ತಿನ್ನುವುದರಿಂದ ಲಾಭವಿದೆ.
ತೇಗು ನಿಲ್ಲದಿದ್ದರೆ ಲಿಂಬೆ ರಸವನ್ನು ಬಾಯಿಯಿಂದ ಹೀರಿಕೊಳ್ಳಬೇಕು ಇದು ಪರಿಣಾಮಕಾರಿಯಾಗುತ್ತದೆ.