ಬೇಸಿಗೆಯಲ್ಲಿ ತಿನ್ನೋದು ಏನನ್ನು?

ಶನಿವಾರ, 1 ಏಪ್ರಿಲ್ 2017 (09:45 IST)
ಬೆಂಗಳೂರು: ಬಿರು ಬೇಸಿಗೆಗೆ ದೇಹಕ್ಕೆ ನೀರಿನಂಶವಿರುವ ಆಹಾರ ಹೆಚ್ಚು ಬೇಕಾಗುತ್ತದೆ. ಹಾಗಿದ್ದರೆ ಯಾವ ಆಹಾರಗಳನ್ನು ಹೆಚ್ಚು ಸೇವಿಸಬೇಕು ನೋಡೋಣ.

 

ಹೆಚ್ಚು ಸಲಾಡ್ ಮತ್ತು ಫ್ರೂಟ್ಸ್ ತಿನ್ನುತ್ತಿದ್ದರೆ ಹೊಟ್ಟೆ ತಂಪಾಗಿರುತ್ತದೆ. ಜತೆಗೆ ಸಾಕಷ್ಟು ನೀರು ಕುಡಿಯುತ್ತಿರಬೇಕು. ಯಾವೆಲ್ಲಾ ಹಣ್ಣು, ತರಕಾರಿ ನಿಮ್ಮ ಹೊಟ್ಟೆ ಸೇರಬೇಕು ಎಂದು ಒಂದು ಪಟ್ಟಿ ಮಾಡಿದ್ದೇವೆ ನೋಡಿ ತಿಂದುಕೊಳ್ಳಿ.

 
·         ಕಲ್ಲಂಗಡಿ ಹಣ್ಣು
·         ಸೌತೇಕಾಯಿ
·         ಸ್ಟ್ರಾಬೆರಿ
·         ದಾಳಿಂಬೆ
·         ಕಿತ್ತಳೆ
·         ಮೂಲಂಗಿ
·         ಕ್ಯಾರೆಟ್
·         ಟೊಮೆಟೊ
·         ಪಾಲಕ್ ಸೊಪ್ಪು
·         ನಿಂಬೆ ಹಣ್ಣಿನ ಪಾನಕ

ಇದರ ಜತೆಗೆ ನೀರಿನ ಬಾಟಲಿ ಸದಾ ನಿಮ್ಮ ಪಕ್ಕದಲ್ಲೇ ಇರಲಿ. ನೀರು ಅಥವಾ ಯಾವುದೇ ದ್ರವಾಹಾ ಹೆಚ್ಚು ಸೇವಿಸುತ್ತಿದ್ದರೆ, ಸುಡುವ ಬೇಸಿಗೆಯಲ್ಲಿ ಚರ್ಮ ಒಣಗಿದಂತಾಗುವುದನ್ನೂ ತಪ್ಪಿಸಬಹುದು. ಮಾಡಿ ನೋಡಿ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ