ಹೋಳಿ ಬಣ್ಣಗಳಿಂದ ನಿಮ್ಮ ಮುಖದ ತ್ವಚೆ ಹಾನಿಯಾಗುವುದನ್ನು ತಡೆಯುವುದು ಹೇಗೆ ಗೊತ್ತಾ?

ಗುರುವಾರ, 5 ಮಾರ್ಚ್ 2020 (06:11 IST)
ಬೆಂಗಳೂರು : ಹೋಳಿ ಹಬ್ಬದ ವೇಳೆ ಕೆಮಿಕಲ್ ಯುಕ್ತ ಬಣ್ಣಗಳಿಂದ ಹೋಳಿ ಆಡುವುದರಿಂದ ಆ ಬಣ್ಣ ಮುಖಕ್ಕೆ ತಾಗಿದರೆ ಮುಖ ಕೆಂಪಾಗಾಗಿ ಅಲರ್ಜಿಯಾಗುತ್ತದೆ. ಅಲ್ಲದೇ ಮುಖ ಡ್ರೈ ಎನಿಸುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ.


ಹೋಳಿ ಆಡುವ ಬದಲು ಮುಖಕ್ಕೆ ಯಾವುದಾದರೂ ಮೊಶ್ಚರೈಸರ್ ಕ್ರೀಂ ಹಚ್ಚಿ. ಹಾಗೇ ತುಟಿಗೆ ಲಿಪ್ ಬಾಮ್ ಹಚ್ಚಿಕೊಳ್ಳಿ. ಕೈಗಳಿಗೆ ಕೊಬ್ಬರಿ ಎಣ್ಣೆ ಅಥವಾ ಆಲೀವ್ ಆಯಿಲ್ ಹಚ್ಚಿಕೊಳ್ಳಿ. ಹಾಗೇ ಉಗುರುಗಳಿಗೆ ಹೋಲಿ ಬಣ್ಣ ತಾಗದಿರುವಂತೆ ಮಾಡಲು ಅದಕ್ಕೆ ಡಾರ್ಕ್ ನೈಲ್ ಪಾಲಿಶ್ ನ್ನು ಹಚ್ಚಿ. ಉಗುರಗಳ ಒಳಗೆ ಬಣ್ಣ ಹಿಡಿಯದಂತೆ ಮಾಡಲು ಉಗುರಿನ ಒಳಗೆ ವ್ಯಾಸಲಿನ್ ಹಾಕಿಕೊಳ್ಳಿ.


ಹಾಗೇ ಹೋಳಿ ಬಣ್ಣದಿಂದ ಮುಖ ಕೆಂಪಾಗಿ ಅಲರ್ಜಿಯಾಗಿದ್ದರೆ ಸೌತೆಕಾಯಿ ರಸ ಮತ್ತು ರೋಸ್ ವಾಟರ್ ಇವೆರಡನ್ನು ಮಿಕ್ಸ್ ಮಾಡಿ ಫ್ರಿಜ್ ನಲ್ಲಿಡಿ. ಅದು ಐಸ್ ಕ್ಯೂಬ್ ಆದ ಮೇಲೆ ಅದನ್ನು ಸ್ನಾನ ಮಾಡಿದ ನಂತರ ಮುಖಕ್ಕೆ ಮಸಾಜ್ ಮಾಡಿ ಇದರಿಂದ ಮುಖ ಕೆಂಪಾಗಿ ಅಲರ್ಜಿಯಾಗಿರುವುದು ಕಡಿಮೆಯಾಗುತ್ತದೆ.


ಹಾಗೇ ಹೋಳಿ ಬಣ್ಣದಿಂದ ಮುಖ ತೊಳೆದ ಮೇಲೂ ಮುಖ  ಡ್ರೈಯಾಗಿದ್ದರೆ ಕಡಲೆಹಿಟ್ಟಿಗೆ ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ಮುಖ ವಾಶ್ ಮಾಡಿ. ಹೀಗೆ ಮಾಡುವುದರಿಂದ ಮುಖದ ಡ್ರೈನೆಸ್ ಕಡಿಮೆಯಾಗುತ್ತದೆ.

.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ