ತನ್ನ ಸಾವನ್ನೇ ಲೈವ್ ಆಗಿ ತೋರಿಸಿದ ಬ್ಯೂಟಿ ಕ್ವೀನ್!

ಸೋಮವಾರ, 3 ಜುಲೈ 2017 (10:57 IST)
ಉಕ್ರೇನ್: ಇತ್ತೀಚೆಗೆ ಕೆಲವರು ಫೇಸ್ ಬುಕ್ ಲೈವ್ ನಲ್ಲಿ ಆತ್ಮಹತ್ಯೆ ಸಂದೇಶ ನೀಡುತ್ತಾ ಜೀವ ಕಳೆದುಕೊಳ್ಳುವ ಸುದ್ದಿ ಓದಿರುತ್ತೀರಿ. ಆದರೆ ಉಕ್ರೇನ್ ನ ಚೆಲುವೆಯೊಬ್ಬಳು ಇನ್ ಸ್ಟಾಗ್ರಾಂನಲ್ಲಿ ತನ್ನ ಗೆಳೆಯನ ಜತೆಗಿನ ಮೋಜು ಲೈವ್ ಆಗಿ ತೋರಿಸುತ್ತಲೇ ಸಾವನ್ನಪ್ಪಿದ್ದಾಳೆ.


ಮಾಡೆಲ್ ಸೋಫಿಯಾ ಮಾಗೆರ್ಕೋ ಈ ರೀತಿ ಪ್ರಾಣ ಕಳೆದುಕೊಂಡಾಕೆ. ಆದರೆ ಇದು ಆತ್ಮಹತ್ಯೆಯಲ್ಲ. ಧಾರುಣ ಅಪಘಾತ. ಗೆಳೆಯನ ಜತೆ ಕಾರಿನಲ್ಲಿ ಪಾನ ಮತ್ತರಾಗಿ ಸಾಗುತ್ತಿರುವುದನ್ನು ಆಕೆ ಲೈವ್ ಆಗಿ ತೋರಿಸುತ್ತಿರುವಾಗಲೇ ಬಿಎಂಡಬ್ಲ್ಯು ಕಾರು ಅಪಘಾತಕ್ಕೀಡಾಗಿದೆ.

ಸ್ಥಳದಲ್ಲೇ ಸೋಫಿಯಾ ಸಾವನ್ನಪ್ಪಿದರೆ, ಆಕೆಯ ಗೆಳೆಯ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಈ ಅಪಘಾತದ ವಿಡಿಯೋ ಇನ್ ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಿ ಪ್ರಸಾರವಾಗುತ್ತಲೇ ಇತ್ತು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ