ಆಸ್ಕರ್‌ 2018 ಗೆದ್ದ 'ದಿ ಶೇಪ್‌ ಆಫ್‌ ವಾಟರ್‌' ಚಿತ್ರ

ಅತಿಥಾ

ಸೋಮವಾರ, 5 ಮಾರ್ಚ್ 2018 (13:18 IST)
2018 ನೇ ಸಾಲಿನ 90 ನೇ ಆಸ್ಕರ್‌ ಪ್ರಶಸ್ತಿಯು ಕಳೆದ ರಾತ್ರಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಲಾಸ್ ಏಂಜಲೀಸ್‌ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯಿತು, 90ನೇ ಆಸ್ಕರ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.
ನಿರ್ದೇಶಕ ಗಿಲ್ಲೆರ್ಮೊ ಡೆಲ್ ಟೊರೊ ಈ ಸಾಲಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ. ಮಿಲ್ಸ್ ಡೇಲ್ ಆಗಿದ್ದಾರೆ. ಅತ್ಯುತ್ತಮ ಚಿತ್ರ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿಕೊಂಡಿದೆ. ಈಗಾಗಲೇ ಚಿತ್ರವು ಗೋಲ್ಡನ್‌ ಗ್ಲೋಬ್ಸ್‌, ಡಿಜಿಎ, ದಿ ಕ್ರಿಟಿಕ್ಸ್‌ ಚಾಯ್ಸ್‌ ಹಾಗೂ ಬಾಫ್ಟಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
 
ಅತ್ಯುತ್ತಮ ನಟಿಯಾಗಿ ''ತ್ರೀ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರ್'' ಚಿತ್ರದ ಅಭಿನಯಕ್ಕಾಗಿ ಫ್ರಾನ್ಸೆಸ್ ಮೆಕ್ ಡೊರ್ಮಾಂಡ್ ಅವರಿಗೆ ನೀಡಲಾಗಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೇರಿ ಓಲ್ಡ್ ಮ್ಯಾನ್ ಅವರಿಗೆ ''ಡಾರ್ಕೆಸ್ಟ್ ಅವರ್'' ಚಿತ್ರದ ಅಭಿನಯಕ್ಕಾಗಿ ನೀಡಲಾಗಿದೆ.
 
ಅತ್ಯುತ್ತಮ ವಿಷುವಲ್ ಎಫೆಕ್ಟ್ ಚಿತ್ರ ಬ್ಲೇಡ್ ರನ್ನರ್ 2049, ಅತ್ಯುತ್ತಮ ಸಿನಿಮಾ ಸಂಕಲನ ಡಂಕಿರ್ಕ್, ಅತ್ಯುತ್ತಮ ಆನಿಮೇಷನ್ ಚಿತ್ರ ಡಿಯರ್ ಬಾಸ್ಕೆಟ್ ಬಾಲ್, ಅತ್ಯುತ್ತಮ ಆನಿಮೇಷನ್ ಫ್ಯೂಚರ್ ಚಿತ್ರ ಡಿಸ್ನಿ-ಪಿಕ್ಸರ್ ಅವರ ಕೊಕೊ ಚಿತ್ರಕ್ಕೆ ಲಭಿಸಿದೆ.
 
ಅತ್ಯುತ್ತಮ ಒರಿಜಿನಲ್ ಸ್ಕೋರ್ ಕೂಡ ಶೇಪ್ ಆಫ್ ವಾಟರ್ ಗೆ ಹೋಗಿದ್ದು ಬ್ಲೇಡ್ ರನ್ನರ್ 2049 ಚಿತ್ರದ ಛಾಯಾಗ್ರಹಣಕ್ಕೆ ರೋಜರ್ ಡೀಕಿನ್ಸ್ ಅವರಿಗೆ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ ಲಭಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ