ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಿನಿಮಾಗಳಲ್ಲಿ ನಟಿಸುತ್ತಾಳೆ ಎನ್ನುವ ಸಂಗತಿ ಆಗಾಗ ಹೊರ ಬಂದರೂ ಅದು ಕೇವಲ ಸುದ್ದಿಯಾಗಿಯೇ ಉಳಿದು ಬಿಡುತ್ತಿತ್ತು. ಅಂತಹ ಸುದ್ದಿ ಹರಡಿದಾಗ ಸಾನಿಯಾ ಮಿರ್ಜಾ ಇಲ್ಲ ತಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ, ತನಗೆ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇಲ್ಲ ಎಂದು ಹೇಳಿ ನಿರಾಸಕ್ತಿ ತೋರುತ್ತಿದ್ದಳು. ಅದು ಸಹಿತ ದೊಡ್ಡ ಸುದ್ದಿಯಾಗಿ ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತು.