ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸಿದ ಸ್ಕೈಫಾಲ್ ಹಾಲಿವುಡ್ ಚಿತ್ರ

ಶುಕ್ರವಾರ, 9 ನವೆಂಬರ್ 2012 (15:32 IST)
ಜೇಮ್ಸ್ ಬಾಂಡ್‌ ಸರಣಿಯ 23ನೇಯ ಚಿತ್ರ ಸ್ಕೈಫಾಲ್ ನೋಡಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಥಿಯೇಟರ್‌ಗೆ ನುಗ್ಗುತ್ತಿದ್ದಾರೆ. ಈ ಚಿತ್ರ ಮೊದಲ ವಾರದಲ್ಲಿಯೇ 34.5 ಕೋಟಿ ರೂಪಾಯಿ ಬಾಚಿಕೊಂಡಿದೆ. ಆರಂಭದ ವಾರಂತ್ಯಕ್ಕೆ 27.5 ಕೋಟಿ ರೂ ದಾಖಲೆಯ ವಹಿವಾಟು ನಡೆಸಿದೆ.

WD
ನವೆಂಬರ್ 1 ರಂದು 907 ಪ್ರಿಂಟ್‌ಗಳೊಂದಿಗೆ ಹಿಂದಿ, ಇಂಗ್ಲೀಷ್, ತಮಿಳು ಮತ್ತು ತೆಲುಗು ಭಾಷೆಯಲ್ಲಿ 2ಡಿ ಮತ್ತು ಐಮೆಕ್ಸ್ ಫಾರ್ಮೆಟ್‌‌ನಲ್ಲಿ ಬಿಡುಗಡೆಯಾದ ಚಿತ್ರ ಹಾಲಿವುಡ್‌ನಲ್ಲಿಯೇ ಅತಿ ಹೆಚ್ಚು ವಹಿವಾಟು ನಡೆಸಿದ ಎರಡನೇ ಚಿತ್ರವಾಗಿದೆ. ದಾಖಲೆಯ ವಹಿವಾಟು ನಡೆಸಿದ ತ್ರಿಡಿ ರಹಿತ ಚಿತ್ರವಾಗಿದೆ.

ಡೇನಿಯಲ್ ಕ್ರೆಗ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಜೇಬಿಯರ್ ಬಾರ್ಡಮ್‌ ನಟಿಸಿದ ಸ್ಕೈಫಾಲ್ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿದ್ದು, ಇತರ ಚಿತ್ರಗಳ ಗಳಿಕೆಗೆ ಹೋಲಿಸಿದಲ್ಲಿ ಅತ್ಯಂತ ಯಶಸ್ವಿ ಚಿತ್ರವಾಗಿದೆ.

ಸೋನಿ ಪಿಕ್ಚರ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕರ್ಸಿ ದಾರುವಾಲಾ ಮಾತನಾಡಿ, ಸ್ಕೈಫಾಲ್ ಚಿತ್ರ ಸೇರಿದಂತೆ ಬಾಂಡ್‌ ಚಿತ್ರಗಳಿಗೆ ದರ್ಶಕರು ಹೆಚ್ಚಿನ ಸಂಖ್ಯೆಯಲ್ಲಿ ವಿಕ್ಷೀಸುವುದರೊಂದಿಗೆ ಪ್ರೋತ್ಸಾಹ ಕೂಡಾ ನೀಡುತ್ತಾರೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಬಾಂಡ್ ಸರಣಿಯ ಇತರ ಚಿತ್ರಗಳಾದ ಕ್ವಾಂಟಮ್ ಆಫ್ ಸೋಲೆಸ್ ಮತ್ತು ಕ್ಯಾಸಿನೋ ರಾಯಲ್ ಚಿತ್ರಗಳು ಭರ್ಜರಿ ಹಿಟ್ ಪ್ರದರ್ಶನ ನೀಡಿವೆ. ಕ್ವಾಂಟಮ್ ಆಫ್ ಸೋಲೆಸ್ ಚಿತ್ರ 44.4 ಕೋಟಿ ರೂಪಾಯಿಗಳ ವಹಿವಾಟು ನಡೆಸಿದರೆ ಕ್ಯಾಸಿನೋ ರಾಯಲ್ ಚಿತ್ರ 40.3 ಕೋಟಿ ರೂಪಾಯಿಗಳ ವಹಿವಾಟು ನಡೆಸಿತ್ತು.

ಇಯಾನ್ ಪ್ರೋಡಕ್ಷನ್ಸ್, ಮೆಟ್ರೋ-ಗೋಲ್ಡ್‌ವಿನ್-ಮೇಯರ್ ಸ್ಟುಡಿಯೋ ಹಾಗೂ ಸೋನಿ ಪಿಕ್ಚರ್ಸ್ ಎಂಟರ್‌ಟೇನ್‌ಮೆಂಟ್ ಸ್ಕೈಫಾಲ್ ಚಿತ್ರವನ್ನು ನಿರ್ಮಿಸಿವೆ.

ವೆಬ್ದುನಿಯಾವನ್ನು ಓದಿ