ನವದೆಹಲಿ: ಇಷ್ಟು ದಿನ ನಾವು ಯಾವ ಉಗ್ರರಿಗೂ ಆಶ್ರಯ ನೀಡುತ್ತಿಲ್ಲ ಎನ್ನುತ್ತಿದ್ದ ಪಾಕ್ ಇದೀಗ ತನ್ನಲ್ಲಿ ಲಷ್ಕರೆ ತೊಯ್ಬಾ, ಜೆಇಎಂನಂತಹ ಉಗ್ರ ಸಂಘಟನೆಗಳು ಇರುವುದು ನಿಜ. ಅದಕ್ಕೆ ಏನೀಗ ಎಂದು ಪ್ರಶ್ನೆ ಮಾಡಿದೆ.
ಪಾಕ್ ವಿದೇಶಾಂಗ ಸಚಿವ ಖವಾಜಾ ಆಸಿಫ್ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ನಿಷೇಧಿತ ಎರಡು ಉಗ್ರ ಸಂಘಟನೆಗಳು ನಮ್ಮ ನೆಲದಲ್ಲಿವೆ. ಅದರಲ್ಲಿ ಅಚ್ಚರಿಪಡುವಂತದ್ದು ಏನಿದೆ? ಪಾಕ್ ಕೂಡಾ ಈ ಸಂಘಟನೆಗಳನ್ನು ನಿಷೇಧಿಸಿದೆ ಎಂದು ಜಿಯೋ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಬ್ರಿಕ್ಸ್ ಸಮ್ಮೇಳನದಲ್ಲಿ ಚೀನಾ ಸೇರಿದಂತೆ ಎಲ್ಲಾ ರಾಷ್ಟ್ರಗಳು ಜೆಇಎಂ ಮತ್ತು ಲಷ್ಕರ್ ಉಗ್ರ ಸಂಘಟನೆಗಳ ವಿರುದ್ಧ ಕಿಡಿ ಕಾರಿದ ಬೆನ್ನಲ್ಲೇ ಪಾಕ್ ಸಚಿವರು ಈ ಹೇಳಿಕೆ ನೀಡಿದ್ದಾರೆ. ನಾವೂ ಈ ಎರಡು ಸಂಘಟನೆಗಳ ವಿರುದ್ಧ ಕೆಲವು ನಿರ್ಬಂಧ ಹೇರಿದ್ದೇವೆ. ಆ ಮೂಲಕ ನಾವೂ ಈ ಸಂಘಟನೆಗಳಿಗೆ ಅಂಕುಶ ಹಾಕಲು ಯತ್ನಿಸಿದ್ದೇವೆ ಎಂದು ತೋರಿಸಿದಂತಾಗುತ್ತದೆ ಎಂದು ಖವಾಜಾ ಹೇಳಿದ್ದಾರೆ.