ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ದಮನಕ್ಕೆ ಜಂಟಿ ನಿರ್ಣಯ

ಸೋಮವಾರ, 4 ಸೆಪ್ಟಂಬರ್ 2017 (13:45 IST)
ಚೀನಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬಹು ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳನ್ನ ಖಂಡಿಸಿರುವ ಬ್ರಿಕ್ಸ್ ರಾಷ್ಟ್ರಗಳ ಮುಖಂಡರು ಭಯೋತ್ಪಾದಕ ಸಂಘಟನೆಗಳ ನಿಗ್ರಹಕ್ಕೆ ಜಂಟಿ ನಿರ್ಣಯ ಕೈಗೊಂಡಿದ್ಧಾರೆ. 

ಗೋವಾ ಶೃಂಗಸಭೆಯಲ್ಲೇ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಯ ಕೈಗೊಳ್ಳಲು ಪ್ರಧಾನಿ ನರೇಂದ್ರಮೋದಿ ಮುದಾಗಿದ್ದರೂ ಅದು ಸಾಧ್ಯವಾಗಿರಲಿಲ್ಲ. ಚೀನಾದ ಶೃಂಗಸಭೆಯಲ್ಲಿ ಬ್ರಿಕ್ಸ್`ನ ಸದಸ್ಯ ರಾಷ್ಟ್ರಗಳಾದ ಚೀನಾ, ರಷ್ಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಮುಖಂಡರು ಭಾರತದ ವಾದವನ್ನ ಒಪ್ಪಿದ್ದಾರೆ. ವಿಧ್ವಸಂಕ ಕೃತ್ ಎಸಗುತ್ತಿರುವ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯಿಬಾ, ಜೈಷ್ ಇ ಮೊಹಮ್ಮದ್, ಹಕ್ಕಾನಿ ನೆಟ್ವರ್ಕ್, ಟಿಟಿಪಿ, ಹಿಜ್ಬುಲ್ ತಹ್ರೀರ್,  ಪೂರ್ವ ಟರ್ಕಿಸ್ತಾನ್ ಇಸ್ಲಾಮಿಕ್ ಮೂಮೆಂಟ್, ಇಸ್ಲಾಮಿಕ್ ಮೂಮೆಂಟ್ ಆಫ್ ಉಜ್ಬೇಕಿಸ್ತ಻ನ್ ಸಂಘಟನೆಗಳನ್ನ ತೊಡೆದು ಹಾಕಲು ಬ್ರಿಕ್ಸ್ ರಾಷ್ಟ್ರಗಳು ಒಮ್ಮತದ ನಿರ್ಣಯ ಕೈಗೊಂಡಿವೆ.

ಭಯೋತ್ಪಾದನೆ ಇಡೀ ಪ್ರಪಂಚಕ್ಕೆ ಕಂಟಕವಾಗಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡುವ ಸಂದರ್ಭ ದ್ವಂದ್ವ ನಿಲುವು ಹೊಂದಿರಬಾರದು ಎಂದು ಬ್ರಿಕ್ಸ್ ರಾಷ್ಟ್ರಗಳು ನಿರ್ಣಯ ಅಂಗೀಕರಿಸಿದ್ದು, ಚೀನಾ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ. ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಉಗ್ರ ಮಸೂದ್ ಅಜರ್`ನನ್ನ ಜಾಗತಿಕ ಉಗ್ರನೆಂದು ಘೋಷಿಸುವ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ತಡೆಯೊಡ್ಡುತ್ತಿದ್ದ ಚೀನಾ ಇದೀಗ ಯಾವ ಹೆಜ್ಜೆ ಇಡುತ್ತದೋ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ