ಮತ ಎಣಿಕೆಯ ಒತ್ತಡದಿಂದ 270 ಚುನಾವಣಾ ಸಿಬ್ಬಂದಿ ಸಾವು. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?

ಸೋಮವಾರ, 29 ಏಪ್ರಿಲ್ 2019 (12:13 IST)
ಇಂಡೋನೇಷಿಯಾ : ಇಂಡೋನೇಷ್ಯಾದಲ್ಲಿ ಮತದಾನಕ್ಕೆ ಮತ ಪತ್ರವನ್ನು ಬಳಸಿದ ಹಿನ್ನಲೆಯಲ್ಲಿ ಮತ ಎಣಿಕೆಯ ಒತ್ತಡ ತಾಳಲಾರದೆ 270 ಚುನಾವಣಾ ಸಿಬ್ಬಂದಿಗಳು  ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ.

ಹೌದು. ಏಪ್ರಿಲ್ 17 ರಂದು ಇಂಡೋನೇಷ್ಯಾದ ಅಧ್ಯಕ್ಷೀಯ ಹಾಗೂ ಸಂಸತ್ತಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. ಚುನಾವಣಾ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲಾಗಿತ್ತು. ಅಂದು ಇಂಡೋನೇಷ್ಯಾದ 8 ಲಕ್ಷ ಮತಗಟ್ಟೆಗಳಲ್ಲಿ 19.30 ಕೋಟಿ ಮತದಾರರು ಮತ ಚಲಾಯಿಸಿದ್ದರು.

 

ಆದರೆ ಇದೀಗ ಅದರ ಎಣಿಕೆ ಕಾರ್ಯ ನಡೆಸುವ ವೇಳೆ ಇದು ಚುನಾವಣಾ ಸಿಬ್ಬಂದಿಗೆ ತೀವ್ರ ಒತ್ತಡ ತಂದಿದ್ದು, ಮತ ಎಣಿಕೆಯ ಒತ್ತಡ ತಾಳಲಾರದೆ ಈವರೆಗೆ 270 ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಜೊತೆಗೆ 1,878 ಮಂದಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ