ವಿಮಾನದಲ್ಲಿ ಮೂತ್ರ ಕಟ್ಟಿಕೊಂಡಿದ್ದ ಪ್ರಯಾಣಿಕನ ಜೀವ ಉಳಿಸಿದ ವೈದ್ಯ

ಶನಿವಾರ, 23 ನವೆಂಬರ್ 2019 (09:16 IST)
ಬೀಜಿಂಗ್ : ವಿಮಾನದಲ್ಲಿ ಹಿರಿಯ ಪ್ರಯಾಣಿಕರೊಬ್ಬರಿಗೆ ಮೂತ್ರದ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ವೈದ್ಯರೊಬ್ಬರು ಅವರಿಗೆ ಚಿಕಿತ್ಸೆ ನೀಡಿದ ವಿಧಾನ ನೋಡಿ ಅಲ್ಲಿದ್ದವರು ಅಚ್ಚರಿಗೊಳಗಾಗಿದ್ದಾರೆ.




ಚೀನಾದಿಂದ ಗುವಾಂಗ್ ಝೌನಿಂದ ನ್ಯೂಯಾರ್ಕ್ ಗೆ ಹೊರಟ್ಟಿದ್ದ ಚೈನಾ ಸದರ್ನ್ ಏರ್ ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ನಾಗರೀಕರೊಬ್ಬರಿಗೆ ಮೂತ್ರ ಕಟ್ಟಿಕೊಂಡಿದೆ. ಮೂತ್ರ ವಿಸರ್ಜನೆ ಮಾಡಲು ಆಗದೆ  ಅವರು ಅಸ್ವಸ್ಥರಾಗಿದ್ದಾರೆ.


ಆಗ ವಿಮಾನ ಸಿಬ್ಬಂದಿಗಳು ಅವರಿಗೆ ವೈದ್ಯಕೀಯ ಚಿಕಿತ್ಸೆ ನೆರವು ಕೇಳಿದಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರೊಬ್ಬರು ಮುಂದೆ ಬಂದು ಅವರನ್ನು ಪರೀಕ್ಷಿಸಿ ಪೈಪ್ ಮೂಲಕ ಆ ವ್ತಕ್ತಿಯ ಮೂತ್ರಕೋಶದಲ್ಲಿರುವ 1 ಲೀಟರ್ ಮೂತ್ರವನ್ನು ಬಾಯಿಂದ ಹೀರಿ ಹೊರಹಾಕವುದರ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ