ಬಾಲಿವುಡ್ ನಟನ ಮೇಲೆ ಆಕರ್ಷಿತಳಾದ ಪತ್ನಿಯನ್ನು ಕೊಂದ ಪತಿ

ಮಂಗಳವಾರ, 12 ನವೆಂಬರ್ 2019 (06:37 IST)
ನ್ಯೂಯಾರ್ಕ್ : ಪತಿಯೊಬ್ಬ ಬಾಲಿವುಟ್ ನಟ ಹೃತಿಕ್ ರೋಷನ್ ಮೇಲೆ ಆಕರ್ಷಿತಳಾದ ಪತ್ನಿಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ನಡೆದಿದೆ.




ಭಾರತ ಮೂಲದ ಮಹಿಳೆ ಡೋನೆ ದೊಜೋಯ್ (27) ಕೊಲೆಯಾದ ಪತ್ನಿ. ದಿನೇಶ್ವರ ಬುದ್ದಿದತ್ತ್ ಕೊಲೆ ಮಾಡಿದ ಪತಿ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ಕಹೋನ ಪ್ಯಾರ್ ಹೈ ಚಿತ್ರ ನೋಡಿದ ಡೋನೆ ದೊಜೋಯ್ ಹೃತಿಕ್ ರೋಷನ್ ಮೇಲೆ ಆಕರ್ಷಿತಳಾಗಿದ್ದು, ಯಾವಾಗಲೂ  ಅವರ ಬಗ್ಗೆ ಮಾತನಾಡುತ್ತಾ, ಅವರ ಚಿತ್ರಗಳನ್ನು ನೋಡುತ್ತಿದ್ದಳು.


ಇದರಿಂದ ಕೋಪಗೊಂಡ ದಿನೇಶ್ವರ ಬುದ್ದಿದತ್ತ್ ಪತ್ನಿಯನ್ನು ಹತ್ಯೆಗೈದು, ಬಳಿಕ ತಾನು ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ