ಕರಡಿ ಮರಿಯನ್ನು ನಾಯಿ ಎಂದು ಸಾಕಿ ಸಂಕಷ್ಟಕ್ಕೀಡಾದ ಮಲೇಷ್ಯಾ ಗಾಯಕಿ
ಶುಕ್ರವಾರ, 14 ಜೂನ್ 2019 (09:06 IST)
ಮಲೇಷಿಯಾ : ಕರಡಿ ಮರಿಯನ್ನು ನಾಯಿ ಎಂದು ಮನೆಯಲ್ಲಿ ಸಾಕಿಕೊಂಡು ಮಲೇಷ್ಯಾ ಗಾಯಕಿ ಇದೀಗ ಸಂಕಷ್ಟಕ್ಕೀಡಾಗಿದ್ದಾಳೆ.
ಹೌದು. ಝರಿತ್ ಸೋಫಿಯಾ ಯಾಸಿನ್ ಎಂಬ ಗಾಯಕಿ ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ನಿತ್ರಾಣ ಆಗಿದ್ದ ಕರಡಿ ಮರಿಯನ್ನು ನೋಡಿ ನಾಯಿ ಎಂದು ಮನೆಗೆ ತಂದು ಆರೈಕೆ ಮಾಡಿದ್ದಾಳೆ. ಅಲ್ಲದೇ ಅದಕ್ಕೆ ಬ್ರೂನೋ ಎಂದು ನಾಮಕರಣ ಕೂಡ ಮಾಡಿದ್ದಾಳೆ. ಆದರೆ ಮಲೇಷ್ಯಾದಲ್ಲಿ ಕರಡಿಯನ್ನು ಸಾಕು ಪ್ರಾಣಿಯಂತೆ ಪೋಷಿಸುವ ಹಾಗಿಲ್ಲ. ಆದ್ದರಿಂದ ಯಾರೋ ಆ ಕರಡಿಯ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಚಾರ ಮಲೇಷ್ಯಾದ ವನ್ಯಜೀವಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಗಾಯಕಿಯ ಮನೆಯ ಮೇಲೆ ದಾಳಿ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.