ಜಪಾನಿನಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳಲು ಕಾರಣವಾಯ್ತು ಒಂದು ಸಣ್ಣ ಅಂಟುಹುಳ

ಸೋಮವಾರ, 24 ಜೂನ್ 2019 (08:42 IST)
ಟೋಕಿಯೊ : ಅಂಟುಹುಳವೊಂದರಿಂದ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಸಂಕಷ್ಟಕ್ಕೀಡಾದ ಘಟನೆ ಜಪಾನ್‌ ನಲ್ಲಿ ನಡೆದಿದೆ.




ಕ್ಯುಶು ರೈಲ್ವೇ ಕಂಪೆನಿ ನಿರ್ವಹಿಸುವ ದಕ್ಷಿಣ ಜಪಾನ್‌ ನ ವಿದ್ಯುತ್ ಲೈನ್‌ ಗಳಲ್ಲಿ ವಿದ್ಯುತ್ ವೈಫಲ್ಯವುಂಟಾದ ಪರಿಣಾಮ 26 ರೈಲುಗಳನ್ನು ಸ್ಥಗಿತಗೊಂಡಿದ್ದವು. ಇದರಿಂದ 12,000 ಪ್ರಯಾಣಿಕರು ಪರದಾಡುವಂತಾಗಿದೆ.


ಈ ಘಟನೆಗೆ ಸಂಬಂಧಿಸಿದಂತೆ ಕ್ಯೂಶು ರೈಲ್ವೇ ಕಂಪೆನಿ ತನಿಖೆ ನಡೆಸಿದಾಗ ಈ ಸಮಸ್ಯೆಗೆ ಒಂದು ಸಣ್ಣ ಅಂಟುಹುಳ ಕಾರಣವಾಗಿತ್ತು. ಅಂಟುಹುಳ ವಿದ್ಯುತ್ ಸಾಧನದ ಒಳಗೆ ಪ್ರವೇಶಿಸಿದ ಪರಿಣಾಮ ಶಾರ್ಟ್‌ ಸರ್ಕ್ಯೂಟ್ ಆಗಿದೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ರೈಲುಗಳು ಸ್ಥಗಿತಗೊಂಡಿವೆ. ಆ ವೇಳೆ ಹುಳ ಕೂಡಾ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ