ಜೆರುಸಲೇಂ : ಬಾಲಕನೊಬ್ಬ ಕೋವಿಡ್-19ನ ಮೂರು ತಳಿಗಳಿಗೂ ಒಳಗಾಗಿದ್ದ ಪ್ರಕರಣವೊಂದು ದಾಖಲಾಗಿದೆ.
ಈ ಅಪರೂಪದ ಪ್ರಕರಣ ಇಸ್ರೆಲ್ ಮೂಲದ 11 ವರ್ಷದ ಬಾಲಕನಲ್ಲಿ ಕಂಡುಬಂದಿದೆ. ಅಲೋನ್ ಹೆಲ್ಫ್ಗಾಟ್ ಎಂಬ ಬಾಲಕ ಈ ಹಿಂದೆ ಆಲ್ಫಾ ಹಾಗೂ ಡೆಲ್ಟಾ ಸೋಂಕಿಗೆ ಒಳಗಾಗಿದ್ದ. ಇದೀಗ ಅದೇ ಬಾಲಕನಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬಂದಿದೆ.
ಶಾಲೆ ಪ್ರಾರಂಭವಾದಾಗಿನಿಂದ ಬಾಲಕನನ್ನು 3-4 ಬಾರಿ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ. ಕಳೆದ 2 ಬಾರಿ ಸೋಂಕು ತಗುಲಿದ್ದಾಗ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗಿತ್ತು.