ಈ ಬಾರಿ ನಿರ್ಮಲಾ ಬಜೆಟ್ ಹೇಗಿರಬಹುದು?

ಸೋಮವಾರ, 31 ಜನವರಿ 2022 (15:14 IST)
ನವದೆಹಲಿ : ಒಂದೆಡೆ ಕೋವಿಡ್ ಸಾಂಕ್ರಾಮಿಕ ಮತ್ತೊಂದೆಡೆ ಪಂಚ ರಾಜ್ಯಗಳ ಚುನಾವಣೆ ನಡುವೆ ಬಜೆಟ್ ದಿನ ಬಂದಿದೆ.    ಮಂಗಳವಾರ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಯಾರಿ ನಡೆಸಿದ್ದಾರೆ. ಪಂಚ ರಾಜ್ಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಿರಬಹುದು ಎಂಬುದು ತಜ್ಞರ ಊಹೆ. ಕಳೆದ ವರ್ಷ ಎಲ್ಲಾ ಲೆಕ್ಕಾಚಾರಗಳನ್ನು ಕೋವಿಡ್ ಉಲ್ಟಾಪಲ್ಟಾ ಮಾಡಿದೆ.     ಹಣದುಬ್ಬರ, ನಿರುದ್ಯೋಗ ಹೆಚ್ಚಿದೆ. ಕಚ್ಚಾ ತೈಲ ಬೆಲೆ ಕಳೆದ 7 ವರ್ಷಗಳಲ್ಲಿಯೇ ಅತ್ಯಂತ ದುಬಾರಿಯಾಗಿದೆ. ಇವೆಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಬಜೆಟ್ ಮಂಡನೆ ಮಾಡಬೇಕಾದ ಸವಾಲು ಹಣಕಾಸು ಸಚಿವರ ಮುಂದಿದೆ.    * ದೀರ್ಘಕಾಲಿಕ ಯೋಜನೆಗಳಿಗೆ ಹೆಚ್ಚು ಆದ್ಯತೆ * ಗ್ರಾಮೀಣ ಜನತೆಗೆ ಹತ್ತಿರವಾಗುವ ಅಂಶ ಇರಬಹುದು * ರೈತ ಹೋರಾಟದ ಕಾವು ತಣಿಸುವ ಘೋಷಣೆಗಳ ನಿರೀಕ್ಷೆ * ಬೆಂಬಲ ಬೆಲೆ ಬಗ್ಗೆ ಮಹತ್ವದ ತೀರ್ಮಾನ ಆಗಬಹುದು * ನಗರ/ಪಟ್ಟಣ ಪ್ರದೇಶಗಳಲ್ಲಿ ನರೇಗಾದಂತಹ ಯೋಜನೆ * ಹೆಚ್ಚು ಹೊಸ ಯೋಜನೆ ಬದಲು ಇರುವ ಯೋಜನೆಗಳಿಗೆ ಬಲ * ಎಲೆಕ್ಷನ್ ರಾಜ್ಯಗಳಿಗೆ ಮೂಲಸೌಕರ್ಯದ ಬಂಪರ್ ನಿರೀಕ್ಷೆ * ರೈಲು ಮಾರ್ಗಗಳ ಖಾಸಗೀಕರಣಕ್ಕೆ ಒತ್ತು ನೀಡದೇ ಇರಬಹುದು * ವಿದ್ಯುತ್ ಕಂಪನಿಗಳ ಖಾಸಗೀಕರಣ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ * ಸ್ಟಾರ್ಟ್ ಅಪ್ಗಳಲ್ಲಿ ದೇಶಿಯ ಹೂಡಿಕೆಗೆ ಪ್ರೋತ್ಸಾಹಕ ಕ್ರಮ * ಸಣ್ಣ,ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ